Sunday, February 16, 2025
Homeರಾಷ್ಟ್ರೀಯ | National30ಲಕ್ಷ ರೂ. ಹಣಕ್ಕಾಗಿ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ದತ್ತು ಪುತ್ರ

30ಲಕ್ಷ ರೂ. ಹಣಕ್ಕಾಗಿ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ದತ್ತು ಪುತ್ರ

ಭೂಪಾಲ್‌,ಮೇ11- ತಾಯಿ ಬ್ಯಾಂಕ್‌ನಲ್ಲಿಟ್ಟಿದ್ದ 30 ಲಕ್ಷ ರೂ.ಗಳಿಗಾಗಿ ದತ್ತು ಮಗನೇ ಆಕೆಯನ್ನು ಕೊಂದು ಬಾತ್‌ರೂಮ್‌ನಲ್ಲಿ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶ ಶಿಯೋಪುರ್‌ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಷಾ(65) ಕೊಲೆಯಾದ ತಾಯಿ. ದೀಪಕ್‌ ಪಚೌರಿ(24) ಕೊಲೆ ಮಾಡಿರುವ ಮಗ.

ಬ್ಯಾಂಕ್‌ನಲ್ಲಿ ಉಷಾ ಅವರು ತನ್ನ ಬ್ಯಾಂಕ್‌ನ ಸ್ಥಿರ ಖಾತೆಯಲ್ಲಿ 30 ಲಕ್ಷ ರೂಗಳನ್ನು ಠೇವಣಿ ಇಟ್ಟಿದ್ದರು. ಈ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ ದತ್ತುಪುತ್ರ ದೀಪಕ್‌, ಏನೂ ತಿಳಿಯದವನಂತೆ ಕೊತ್ವಾಲಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಅಭಿಷೇಕ್‌ ಆನಂದ್‌ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ, ಆತನ ಸಂಬಂಧಿಕರು ಮತ್ತು ನೆರೆಹೊರೆಯವರ ವಿಚಾರಣೆ ನಡೆಸಲಾಗಿತ್ತು. ಯಾವುದೆ ಸುಳಿವು ಸಿಕ್ಕಿರಲಿಲ್ಲ.ಈ ನಡುವೆ ಆರೋಪಿ ದೀಪಕ್‌ ವ್ಯತಿರಿಕ್ತ ಹೇಳಿಕೆಗಳನ್ನು ನೀಡಲಾರಂಭಿಸಿದಾಗ ಅನುಮಾನಗೊಂಡ ಪೊಲೀಸರು, ವಶಕ್ಕೆ ವಿಚಾರಣೆ ನಡೆಸಿದಾಗ, ಷೇರು ಮಾರುಕಟ್ಟೆಯಲ್ಲಿ 15 ಲಕ್ಷ ರೂ. ಕಳೆದುಕೊಂಡಿದ್ದು, ಹಣದ ಅಗತ್ಯವಿತ್ತು. ತನ್ನ ತಾಯಿ ಅವರ ಖಾತೆಯಲ್ಲಿ 30 ಲಕ್ಷ ಫಿಕ್ಸೆಡ್‌ ಡೆಪಾಸಿಟ್‌ ಮಾಡಿದ್ದರು. ಅದರಲ್ಲಿ ನನ್ನನ್ನು ನಾಮಿನಿ ಮಾಡಿದ್ದರು. ಹೀಗಾಗಿ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯು ನೀಡಿದ ಮಾಹಿತಿ ಮೇರೆಗೆ ಮನೆಯ ಸ್ನಾನಗೃಹದಲ್ಲೇ ರೂಮ್‌ ಕೊರೆದಿರುವುದನ್ನು ಪೊಲೀಸ್‌‍ ತಂಡ ಪತ್ತೆ ಹಚ್ಚಿ, ಪ್ಲಾಸ್ಟರ್‌ ತೆಗೆದಾಗ ಮಹಿಳೆಯ ಶವ ಪತ್ತೆಯಾಗಿದೆ. ಸಂತ್ರಸ್ತೆ ಮತ್ತು ಆಕೆಯ ಪತಿ ಭುವೇಂದ್ರ ಪಚೌರಿ 23 ವರ್ಷಗಳ ಹಿಂದೆ ದೀಪಕ್‌ ಅನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಭಿಷೇಕ್‌ ಆನಂದ್‌ ತಿಳಿಸಿದ್ದಾರೆ.

RELATED ARTICLES

Latest News