Saturday, December 14, 2024
Homeಜಿಲ್ಲಾ ಸುದ್ದಿಗಳು | District Newsಬಿಸಿಲ ತಾಪಕ್ಕೆ ತಲೆತಿರುಗಿ ಬಿದ್ದ ಸಂಸದ ಉಮೇಶ್‌ ಜಾಧವ್‌

ಬಿಸಿಲ ತಾಪಕ್ಕೆ ತಲೆತಿರುಗಿ ಬಿದ್ದ ಸಂಸದ ಉಮೇಶ್‌ ಜಾಧವ್‌

ಕಲಬುರಗಿ,ಮೇ1- ಭಾರೀ ತಾಪಮಾನದಿಂದಾಗಿ ಪ್ರಚಾರದ ವೇಳೆ ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ್‌ ಜಾಧವ್‌ ಕುಸಿದು ಬಿದ್ದಿರುವ ಘಟನೆ ನಡೆದಿದೆ. ಉಮೇಶ್‌ ಜಾಧವ್‌ ಅವರು,ಕಲಬುರಗಿಯಲ್ಲಿ ವಿರಶೈವ ಲಿಂಗಾಯತ ಸಮುದಾಯದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಕಣದಲ್ಲಿರುವ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವುದೇ ಸವಾಲಾಗಿದೆ.

RELATED ARTICLES

Latest News