Friday, February 7, 2025
Homeರಾಷ್ಟ್ರೀಯ | Nationalಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆ : ಬಿಎಸ್‌ಪಿ ಸಂಸದನ ಉಚ್ಛಾಟನೆ

ಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆ : ಬಿಎಸ್‌ಪಿ ಸಂಸದನ ಉಚ್ಛಾಟನೆ

ಬಲರಾಂಪುರ, ಮಾ 23 (ಪಿಟಿಐ) : ಉತ್ತರ ಪ್ರದೇಶದ ಶ್ರಾವಸ್ತಿಯ ಬಹುಜನ ಸಮಾಜ ಪಕ್ಷದ ಸಂಸದ ರಾಮ್ ಶಿರೋಮಣಿ ವರ್ಮಾ ಅವರನ್ನು ಅಶಿಸ್ತು ಮತ್ತು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲಾಗಿದೆ.

ವರ್ಮಾ ಅವರು ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತುಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಲಾಲ್ ಚಂದ್ ಕೋರಿ ತಿಳಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರ ಕಾರ್ಯಶೈಲಿಯಲ್ಲಿ ಸುಧಾರಣೆ ಕಾಣಲಿಲ್ಲ.

ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹಿತದೃಷ್ಟಿಯಿಂದ ಶ್ರಾವಸ್ತಿ ಸಂಸದರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಲಕ್ನೋದಲ್ಲಿರುವ ಪಕ್ಷದ ಕಚೇರಿಯ ನಿರ್ದೇಶನದಂತೆ ವರ್ಮಾ ಅವರನ್ನು ಉಚ್ಚಾಟಿಸಲಾಗಿದೆ ಎಂದು ಕೋರಿ ಹೇಳಿದ್ದಾರೆ.

RELATED ARTICLES

Latest News