Friday, February 23, 2024
Homeರಾಷ್ಟ್ರೀಯರತನ್ ಟಾಟಾಗೆ ಜೀವ ಬೆದರಿಕೆ ಹಾಕಿದ ವ್ಯಕಿ ಸುಳಿವು ಲಭ್ಯ

ರತನ್ ಟಾಟಾಗೆ ಜೀವ ಬೆದರಿಕೆ ಹಾಕಿದ ವ್ಯಕಿ ಸುಳಿವು ಲಭ್ಯ

ಮುಂಬೈ,ಡಿ.16- ಹಿರಿಯ ಕೈಗಾರಿಕೋದ್ಯಮಿ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರಿಗೆ ಬೆದರಿಕೆ ಕರೆ ಮಾಡಿದ ಆರೋಪಿ ಎಂಬಿಎ ಪದವಿದರನನ್ನು ಪತ್ತೆಹಚ್ಚಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಅನಾಮಧೇಯ ಕರೆ ಮಾಡಿದ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಇದೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪೊಲೀಸರಿಗೆ ಕರೆ ಮಾಡಿ ರತನ್ ಟಾಟಾ ಅವರಿಗೆ ಭದ್ರತೆ ಹೆಚ್ಚಿಸದಿದ್ದರೆ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರಂತೆ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದ.ಪ್ರಸಿದ್ಧ ಕೈಗಾರಿಕೋದ್ಯಮಿಯೂ ಆಗಿದ್ದ ಮಿಸ್ತ್ರಿ ಅವರು 2022ರಲ್ಲಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.

ಬಹಿರಂಗವಾಯ್ತು ಸಂಸತ್ ಮೇಲೆ ಹೊಗೆ ದಾಳಿ ಹಿಂದಿನ ಉದ್ದೇಶ

ಕರೆ ಸ್ವೀಕರಿಸಿದ ನಂತರ, ಮುಂಬೈ ಪೊಲೀಸರು ಸಂಪೂರ್ಣ ಅಲರ್ಟ್ ಮೋಡ್‍ಗೆ ತೆರಳಿದರು ಮತ್ತು ರತನ್ ಟಾಟಾ ಅವರ ವೈಯಕ್ತಿಕ ಭದ್ರತೆಯನ್ನು ಪೂರೈಸಲು ವಿಶೇಷ ತಂಡವನ್ನು ನಿಯೋಜಿಸಲಾಯಿತು ಮತ್ತು ಇತರ ತಂಡವು ಕರೆ ಮಾಡಿದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮುಂದಾಯಿತು.

ತಾಂತ್ರಿಕ ಬೆಂಬಲ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರ ಸಹಾಯದಿಂದ ಕರೆ ಮಾಡಿದವರನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆ ಮಾಡಿದವರ ಸ್ಥಳ ಕರ್ನಾಟಕದಲ್ಲಿ ಇರುವುದು ಪತ್ತೆಯಾಗಿದ್ದು, ಆತ ಪುಣೆ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಪುಣೆಯ ನಿವಾಸಕ್ಕೆ ತಲುಪಿದಾಗ, ಕರೆ ಮಾಡಿದ ವ್ಯಕ್ತಿ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು ಅವರ ಪತ್ನಿ ನಗರದ ಭೋಸಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರೆ ಮಾಡಿದವರ ಸಂಬಂಕರನ್ನು ಪ್ರಶ್ನಿಸಿದ ನಂತರ, ಅವರು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ ಎಂದು ತಿಳಿದುಕೊಂಡರು ಮತ್ತು ಆರೋಪಿ ಕದ್ದ ಫೋನ್‍ನಿಂದ ಪೊಲೀಸರಿಗೆ ಕರೆ ಮಾಡಿದ್ದಾನೆ ಎನ್ನುವುದು ಪತ್ತೆಯಾಗಿದೆ.

RELATED ARTICLES

Latest News