Monday, December 2, 2024
Homeರಾಷ್ಟ್ರೀಯ | National5 ಕೋಟಿ ಹಫ್ತಾ ನೀಡಲು ಸಲ್ಮಾನ್ ಖಾನ್‌ಗೆ ಬೆದರಿಕೆ

5 ಕೋಟಿ ಹಫ್ತಾ ನೀಡಲು ಸಲ್ಮಾನ್ ಖಾನ್‌ಗೆ ಬೆದರಿಕೆ

Mumbai Traffic Police receive threat message demanding ₹5 crore from Salman Khan

ಮುಂಬೈ, ಅ. 18 (ಪಿಟಿಐ) – ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಅವರಿಂದ 5 ಕೋಟಿ ನೀಡುವಂತೆ ಮುಂಬೈ ಸಂಚಾರ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌‍) ಅಡಿಯಲ್ಲಿ ಬೆದರಿಕೆ ಮತ್ತು ಸುಲಿಗೆಗಾಗಿ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ನಗರದ ಟ್ರಾಫಿಕ್‌ ಕಂಟ್ರೋಲ್‌ ರೂಮ್‌ಗೆ ಅದರ ವಾಟ್ಸಾಪ್‌ ಸಹಾಯವಾಣಿಯಲ್ಲಿ ಬೆದರಿಕೆ ಬಂದಿದೆ ಎಂದು ಅವರು ಹೇಳಿದರು.

ಸಂದೇಶ ಕಳುಹಿಸಿರುವವರು ನಟನಿಗೆ ಬೆದರಿಕೆ ಹಾಕಿ 5 ಕೋಟಿ ರೂ.ಗೆ ಬೇಡಿಕೆ ಇಟ್ಟಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸೂಪರ್‌ಸ್ಟಾರ್‌ಗೆ ಈ ಹಿಂದೆ ಲಾರೆನ್ಸ್‌‍ ಬಿಷ್ಣೋಯ್‌ ಗ್ಯಾಂಗ್‌ನಿಂದ ಕೊಲೆ ಬೆದರಿಕೆಗಳು ಬಂದಿದ್ದವು.ಏಪ್ರಿಲ್‌ನಲ್ಲಿ ನಟನ ಬಾಂದ್ರಾ ಮನೆಯ ಹೊರಗೆ ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರು ಗುಂಡು ಹಾರಿಸಿದ್ದರು ಎಂದು ಅವರು ಹೇಳಿದರು.

ಏತನಧ್ಯೆ, ಜೂನ್‌ನಲ್ಲಿ ಬಿಷ್ಣೋಯ್‌ ಗ್ಯಾಂಗ್‌ ಖಾನ್‌ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದನ್ನು ನವಿ ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ ಮತ್ತು ಅದರ ಶೂಟರ್‌ಗಳಲ್ಲಿ ಒಬ್ಬನನ್ನು ಹರಿಯಾಣದ ಪಾಣಿಪತ್‌ನ ಸುಖಬೀರ್‌ ಸಿಂಗ್‌ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News