Thursday, December 5, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರ : ಛತ್ರಪತಿ ಶಿವಾಜಿ ಪ್ರತಿಮೆ ಕುಸಿತಕ್ಕೆ ಕಾರಣರಾಗಿದ್ದ ವ್ಯಕ್ತಿ ಬಂಧನ

ಮಹಾರಾಷ್ಟ್ರ : ಛತ್ರಪತಿ ಶಿವಾಜಿ ಪ್ರತಿಮೆ ಕುಸಿತಕ್ಕೆ ಕಾರಣರಾಗಿದ್ದ ವ್ಯಕ್ತಿ ಬಂಧನ

Shivaji Statue collapse: Fabricator held in UP; used substandard material, say police

ಮುಂಬೈ, ಅ. 18 (ಪಿಟಿಐ) ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯೊಂದರಲ್ಲಿ ಇತ್ತೀಚೆಗೆ ಕುಸಿದು ಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಉತ್ತರ ಪ್ರದೇಶದಿಂದ ಬಂಧಿತರಾಗಿರುವ ಫ್ಯಾಬ್ರಿಕೇಟರ್‌ ಪರಮೇಶ್ವರ ರಾಮನರೇಶ್‌ ಯಾದವ್‌ ಅವರು ಮರಾಠಾ ಯೋಧ ರಾಜನ 35 ಅಡಿ ಎತ್ತರದ ಪ್ರತಿಮೆಯನ್ನು ರೂಪಿಸುವಾಗ ಗುಣಮಟ್ಟವಿಲ್ಲದ ವಸ್ತುಗಳನ್ನು ಬಳಸಿದ್ದಾರೆ ಎಂದು ಅರೋಪಿಸಲಾಗಿದೆ.

ಯುಪಿಯ ಮಿರ್ಜಾಪುರದ ನಿವಾಸಿಯಾಗಿರುವ ಯಾದವ್‌ ಪ್ರತಿಮೆ ಕುಸಿತದಲ್ಲಿ ಅವರ ಪಾತ್ರ ಬೆಳಕಿಗೆ ಬಂದ ನಂತರ ಅವರನ್ನು ಬಂಧಿಸಲಾಗಿದೆ.ಪ್ರತ್ಯೇಕ ಭಾಗಗಳನ್ನು ಬೆಸುಗೆ ಹಾಕಿ ಶಿವಾಜಿ ಪ್ರತಿಮೆಯನ್ನು ರಚಿಸುವ ಜವಾಬ್ದಾರಿಯನ್ನು ಯಾದವ್‌ ಅವರಿಗೆ ವಹಿಸಲಾಗಿತ್ತು ಎಂದು ಅವರು ಹೇಳಿದರು.

ರಚನೆಯನ್ನು ರೂಪಿಸಲು ತಯಾರಕರು ಕೆಳಮಟ್ಟದ ವಸ್ತುಗಳನ್ನು ಬಳಸಿದ್ದಾರೆ ಮತ್ತು ವೆಲ್ಡಿಂಗ್‌ ಮೂಲಕ ಭಾಗಗಳನ್ನು ಸರಿಯಾಗಿ ಜೋಡಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತಾಂತ್ರಿಕ ವಿಶ್ಲೇಷಣೆಯ ವೇಳೆ ಕುಸಿದ ಉಕ್ಕಿನ ಪ್ರತಿಮೆ ಕೆಲವೆಡೆ ತುಕ್ಕು ಹಿಡಿದಿರುವುದು ಕಂಡುಬಂದಿದ್ದು, ಕಡಿಮೆ ಗುಣಮಟ್ಟದ ವಸ್ತುಗಳ ಬಳಕೆಯಾಗಿದೆ ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಆತನ ಪಾತ್ರ ದಢಪಟ್ಟ ನಂತರ, ಯಾದವ್‌ ಅವರನ್ನು ಕೂಡ ಆರೋಪಿಯನ್ನಾಗಿ ಮಾಡಲಾಯಿತು ಮತ್ತು ನಂತರ ಬಂಧಿಸಲಾಯಿತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್‌‍ ಕಸ್ಟಡಿಗೆ ನೀಡಲಾಗಿದೆ.

ಕಳೆದ ವರ್ಷ ಡಿಸೆಂಬರ್‌ 4 ರಂದು (ನೌಕಾಪಡೆಯ ದಿನ) ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ ತೆಹಸಿಲ್‌ನಲ್ಲಿರುವ ರಾಜ್‌ಕೋಟ್‌ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ 17 ನೇ ಶತಮಾನದ ಮರಾಠ ಸಾವ್ರಾಜ್ಯದ ಸಂಸ್ಥಾಪಕರ ಪ್ರತಿಮೆಯು ಬಲವಾದ ಗಾಳಿಯ ನಡುವೆ ಆಗಸ್ಟ್‌ 26 ರಂದು ಕುಸಿದು ಬಿದ್ದಿತು. ಪ್ರತಿಮೆಯ ಶಿಲ್ಪಿ-ಗುತ್ತಿಗೆದಾರ ಜಯದೀಪ್‌ ಆಪ್ಟೆ ಮತ್ತು ಸಲಹೆಗಾರ ಚೇತನ್‌ ಪಾಟೀಲ್‌ ಅವರನ್ನು ನಂತರ ಬಂಧಿಸಲಾಗಿತ್ತು.

RELATED ARTICLES

Latest News