Sunday, April 28, 2024
Homeರಾಷ್ಟ್ರೀಯಮುಂಬೈ ವಿವಿಯಲ್ಲಿ ದೇವಸ್ಥಾನ ನಿರ್ವಹಣೆ ಕೋರ್ಸ್ ಆರಂಭ

ಮುಂಬೈ ವಿವಿಯಲ್ಲಿ ದೇವಸ್ಥಾನ ನಿರ್ವಹಣೆ ಕೋರ್ಸ್ ಆರಂಭ

ಮುಂಬೈ, ಡಿ 23 (ಪಿಟಿಐ) ದೇವಸ್ಥಾನದ ನಿರ್ವಹಣೆಯ ಕುರಿತು ಕೋರ್ಸ್ ನೀಡಲು ಆಕ್ಸ್‍ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್‍ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿರುವುದಾಗಿ ಮುಂಬೈ ವಿಶ್ವವಿದ್ಯಾಲಯ ತಿಳಿಸಿದೆ. ಈ ಸಹಯೋಗದ ಅಡಿಯಲ್ಲಿ ಆಫ್‍ಲೈನ್ ಮತ್ತು ಆನ್‍ಲೈನ್ ಮೋಡ್‍ನಲ್ಲಿ ನೀಡಲಾಗುವ ವಿವಿಧ ಡಿಫ್ಲೋಮಾ ಮತ್ತು ಪ್ರಮಾಣಪತ್ರ ಮಟ್ಟದ ಕೋರ್ಸ್‍ಗಳಲ್ಲಿ ಇದು ಒಂದಾಗಿರುತ್ತದೆ.

ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಮತ್ತು ಅದರ ಸಂಸ್ಕøತ ವಿಭಾಗವು ಆಕ್ಸ್‍ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್‍ನೊಂದಿಗೆ ಎಂಒಯುಗೆ ಸಹಿ ಹಾಕಿದೆ ಎಂದು ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮೋದಿ ವಿರುದ್ಧ ಸ್ಪರ್ಧಿಸುವಂತೆ ದೀದಿಗೆ ಬಿಜೆಪಿ ಮುಖಂಡ ಚಾಲೆಂಜ್

ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್‍ಗಳೊಂದಿಗೆ ಹಿಂದೂ ತತ್ವಶಾಸ್ತ್ರದ ಸಮಗ್ರ ಅಧ್ಯಯನದ ಮೇಲೆ ಕೋರ್ಸ್ ಕೇಂದ್ರೀಕರಿಸುತ್ತದೆ.

RELATED ARTICLES

Latest News