ಮುಂಬೈ, ಜೂನ್ 3 (ಪಿಟಿಐ) ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಕೇಬಲ್ ಕಡಿತಗೊಂಡ ಹಿನ್ನಲೆಯಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಪಶ್ಚಿಮ ರೈಲ್ವೆ ಜಾಲದ ಸ್ಥಳೀಯ ರೈಲು ಸೇವೆಗಳು ಬೆಳಿಗ್ಗೆ ಸ್ಥಗಿತಗೊಂಡಿತ್ತು.
ಬೊರಿವಲಿಯು ಉತ್ತರ ಮುಂಬೈನ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮತ್ತು ಕಚೇರಿಗೆ ಹೋಗುವವರು ಅಲ್ಲಿಂದ ಪ್ರತಿದಿನ ಸ್ಥಳೀಯ ರೈಲು ಸೇವೆಗಳನ್ನು ಬಳಸುತ್ತಾರೆ,ತಾಂತ್ರಿಕ ಸಮಸ್ಯೆರೈಲು ರದ್ದಾದರಿಂದ ಬದಲಿ ವ್ಯವಸ್ಥೆಗೆ ಪರದಾಡಿದರು.
ಕೇಬಲ್ ಕಡಿತಗೊಂಡಿರುವುದರಿಂದ ಕೆಲವು ಟ್ರ್ಯಾಕ್ ಬದಲಾಯಿಸುವ ಪಾಯಿಂಟ್‌ಗಳು ಕಾರ್ಯನಿರ್ವಹಿಸುವುದಿಲ್ಲ ಇದರಿಂದ ಬೋರಿವಲಿ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ಮತ್ತು 2 ರಿಂದ ಸಬ್‌ಅರ್ಬನ್ ರೈಲುಗಳನ್ನು ನಿರ್ವಹಿಸಲಾಗುತ್ತಿಲ್ಲ ಎಂದು ಪಶ್ಚಿಮ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
3 ರಿಂದ 8 ಪ್ಲಾಟ್‌ಫಾರ್ಮ್‌ಗಳಿಂದ ರೈಲುಗಳನ್ನು ನಿರ್ವಹಿಸಲಾಗುತ್ತಿದೆ.ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಆದ್ಯತೆಯ ಮೇಲೆ ದುರಸ್ತಿಕಾರ್ಯ ನಡೆಯುತ್ತಿದೆ ಎಂದು ಪಶ್ಚಿಮ ರೈಲ್ವೆ ಹೇಳಿದೆ.
ಪಶ್ಚಿಮ ರೈಲ್ವೇ ಅಧಿಕಾರಿ ಪ್ರಕಾರ ಪ್ರತಿದಿನ ಸುಮಾರು 30 ಲಕ್ಷ ಪ್ರಯಾಣಿಕರು ಅದರ ಜಾಲದಲ್ಲಿ ಪ್ರಯಾಣಿಸುತ್ತಾರೆ, ಇದು ದಕ್ಷಿಣ ಮುಂಬೈನ ಚರ್ಚ್‌ಗೇಟ್ ಮತ್ತು ನೆರೆಯ ಪಾಲ್ಘರ್ ಜಿಲ್ಲೆಯ ದಹಾನು ನಡುವೆ ಹರಡಿದೆ ಎಂದು ತಿಳಿಸಿದ್ದಾರೆ.