Thursday, April 3, 2025
Homeಜಿಲ್ಲಾ ಸುದ್ದಿಗಳು | District Newsಬಾಗೇಪಲ್ಲಿ : ಕತ್ತು ಸೀಳಿ ಕೊಲೆ ವ್ಯಕ್ತಿಯ ಕೊಲೆ

ಬಾಗೇಪಲ್ಲಿ : ಕತ್ತು ಸೀಳಿ ಕೊಲೆ ವ್ಯಕ್ತಿಯ ಕೊಲೆ

ಬಾಗೇಪಲ್ಲಿ,ಮಾ.24- ಹೋಟೆಲ್ ಮುಂಭಾಗ ವ್ಯಕ್ತಿಯೊಬ್ಬನನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಪಟ್ಟಣದ ಹೊರವಲಯದ ಟಿಬಿ ಕ್ರಾಸ್ ಬಳಿ ಕಳೆದ ರಾತ್ರಿ ನಡೆದಿದೆ.ಆಂಧ್ರಪ್ರದೇಶ ದೇಮುಕೇತು ಪಲ್ಲಿ ಗ್ರಾಮದ ನಿವಾಸಿ ವೆಂಕಟೇಶಪ್ಪ (55) ಕೋಲೆಯಾದ ವ್ಯಕ್ತಿ.

ಕಳೆದ ರಾತ್ರಿ ಹೋಟೆಲ್ ಮುಂಭಾಗದ ಅಡುಗೆ ಮಾಡುವ ಸ್ಥಳದಲ್ಲಿ ದುಷ್ಕರ್ಮಿಗಳು ವೆಂಕಟೇಶಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಹೋಟೆಲ್ ಬಳಿ ಬಂದ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ನೋಡಿ ಹೋಟೆಲ್ ಮಾಲೀಕರಿಗೆ ತಿಳಿಸಿದ್ದಾರೆ.

ಕೂಡಲೇ ಮಾಲೀಕ ಹೋಟೆಲ್ ಬಳಿ ಬಂದಿದ್ದು ರಾತ್ರಿ ಸುಮಾರು 10.30 ರವರೆಗೂ ಹೊಟೆಲ್‍ನಲ್ಲೆ ಇದ್ದೆವು. ನಂತರ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದ್ದು 11 ಗಂಟೆ ನಂತರ ಈ ದುಷ್ಕøತ್ಯ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕೂಡಲೇ ಬಾಗೇಪಲ್ಲಿ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಪಿಐ ಪ್ರಶಾಂತ್ ವರ್ಣಿ ಪರಿಶೀಲನೆ ನಡೆಸಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ .ಯಾವ ಕಾರಣಕ್ಕಾಗಿ ಹಾಗೂ ಯಾರು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿದು ಬರಲಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News