Wednesday, May 22, 2024
Homeಮನರಂಜನೆಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ ಕಳ್ಳರ ಕೈಚಳಕ

ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ ಕಳ್ಳರ ಕೈಚಳಕ

ಬೆಂಗಳೂರು,ಜ.10- ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್ ಅವರ ಅತ್ತೆ ಮನೆಯಲ್ಲಿ 2.5 ಲಕ್ಷ ಹಣ ಕಳ್ಳತನವಾಗಿರುವ ಬಗ್ಗೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಲೇಔಟ್‍ನಲ್ಲಿ ಗುರುಕಿರಣ್‍ರವರ ಅತ್ತೆ ಕಸ್ತೂರಿ ಶೆಟ್ಟಿ ಅವರ ಮನೆಯಿದೆ. ಡಿ.31ರಂದು ಬೀರುವಿನಲ್ಲಿ 2.5 ಲಕ್ಷ ಹಣ ಇಟ್ಟಿದ್ದರು. ಜ.5ರಂದು ನೋಡಿದಾಗ ಹಣ ಇರಲಿಲ್ಲ.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತೇ..?

ತಕ್ಷಣ ಇದರಿಂದ ಗಾಬರಿಯಾಗಿ ಕಸ್ತೂರಿ ಶೆಟ್ಟಿ ಅವರು ಬೀರು ಪೂರ್ತಿ ಹುಡುಕಿದರೂ ಹಣ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ನಾಪತ್ತೆಯಾಗಿರುವ ಬಗ್ಗೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಠಾಣೆ ಪೊಲೀಸರು ಮನೆಕೆಲಸದ ಮಹಿಳೆಯನ್ನು ಕರೆಸಿಕೊಂಡು ವಿಚಾರಣೆಗೊಳಪಡಿಸಿದ್ದಾರೆ.

RELATED ARTICLES

Latest News