Tuesday, April 30, 2024
Homeಮನರಂಜನೆವಿಜಯ್-ರಶ್ಮಿಕಾ ಮದ್ವೆ ಫಿಕ್ಸ್, ಫೆಬ್ರವರಿಯಲ್ಲಿ ನಿಶ್ಚಿತಾರ್ಥ..?

ವಿಜಯ್-ರಶ್ಮಿಕಾ ಮದ್ವೆ ಫಿಕ್ಸ್, ಫೆಬ್ರವರಿಯಲ್ಲಿ ನಿಶ್ಚಿತಾರ್ಥ..?

ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಸಾಲು ಸಾಲು ಹಿಟ್‌ ಸಿನಿಮಾಗಳ ಬಳಿಕ ರಶ್ಮಿಕಾ ಮಂದಣ್ಣ ಮತ್ತೆ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಇನ್ನು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಅನ್ನೋ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಸದ್ಯದಲ್ಲೇ ಮದ್ವೆಯಾಗ್ತಾರೆ ಅನ್ನೋ ಮಾತು ಸಹ ಇದೆ. ಇನ್ನು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವೈರಲ್ ಫೋಟೋದೊಂದಿಗೆ ಡೇಟಿಂಗ್‌ ವದಂತಿಯನ್ನು ಹುಟ್ಟುಹಾಕಿದ್ರು. ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಫೋಟೋ ಅವರ ಅಭಿಮಾನಿಗಳಲ್ಲಿ ಊಹಾಪೋಹ ಮತ್ತು ಉತ್ಸಾಹದ ಅಲೆಯನ್ನು ಹುಟ್ಟುಹಾಕಿತ್ತು. ಫೋಟೋ ನೋಡಿದ ತಕ್ಷಣ ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಅಂತ ಹೇಳ್ತಾ ಇದ್ರು.

ಇದೀಗ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸದ್ಯದಲ್ಲೇ ಮದ್ವೆಯಾಗ್ತಾರೆ, ಫೆಬ್ರವರಿಯಲ್ಲಿ ಎಂಗೇಜ್‌ಮೆಂಟ್ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳ ಸಕ್ಸಸ್ ಬೆನ್ನಲ್ಲಿಯೇ ಬಾಲಿವುಡ್, ಟಾಲಿವುಡ್ ಅಂತ ಫುಲ್ ಬಿಝಿಯಾಗಿದ್ದಾರೆ. ಇದೆಲ್ಲದರ ಮಧ್ಯೆಯೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ಪೋಸ್ಟ್ ಮಾಡೋದನ್ನು ಮಾತ್ರ ಮರೆಯೋದಿಲ್ಲ. ಇತ್ತೀಚಿಗೆ ರಶ್ಮಿಕಾ ಬ್ಲ್ಯಾಕ್‌ ಡ್ರೆಸ್‌ನಲ್ಲಿ ಹಾಟ್ ಫೋಸ್ ಕೊಟ್ಟಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅನಿಮಲ್ ಚಿತ್ರದ ಸಕ್ಸಸ್ ಪಾರ್ಟಿಗೆ ರಶ್ಮಿಕಾ ಈ ಬ್ಲ್ಯಾಕ್ ಗೌನ್ ಧರಿಸಿದ್ದರು. ಕಿರಿಕ್‌ ಬೆಡಗಿಯ ಬ್ಲ್ಯಾಕ್ ಡ್ರೆಸ್‌ನ ಹಾಟ್‌ ಅವತಾರಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸಿಜ್ಲಿಂಗ್‌, ಹಾಟ್‌, ಬ್ಯೂಟಿ ಎಂದೆಲ್ಲಾ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ ಕಳ್ಳರ ಕೈಚಳಕ

ಅನಿಮಲ್ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್ ಸುದ್ದಿಯಲ್ಲಿದ್ದಾರೆ. ನಟ ರಣಬೀರ್ ಕಪೂರ್ ಜೊತೆಗಿನ ಲಿಪ್ಲಾಕ್ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಜೀವನದಲ್ಲಿ ಯಾರೋ ಎಂಟ್ರಿ ಕೊಟ್ಟ ಹಾಗಿದೆ.

ನಿಗೂಢ ಪೋಸ್ಟ್ ಹಾಕುವ ಮೂಲಕ ನಟಿ, ಅಭಿಮಾನಿಗಳ ತಲೆಗೆ ಈಚೆಗೆ ಹುಳು ಬಿಟ್ಟಿದ್ದರು. ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ನನ್ನ ಲೈಫ್ಗೆ ಎಂಟ್ರಿ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಹೇಳಲು ಬಯಸುತ್ತೇನೆ ಎಂಬ ಬರಹ ಇರುವ ಪೋಸ್ಟ್ ಹಾಕಿದ್ದರು. ಅಷ್ಟಕ್ಕೂ ನಟಿ ಈ ಪೋಸ್ಟ್ ಹಾಕಿರುವುದು ನಟ ವಿಜಯ ದೇವರಕೊಂಡ ಅವರಿಗೆ ಎಂದು ಹೇಳಲಾಗುತ್ತಿದ್ದರೂ, ನಟಿಯ ಬದುಕಲ್ಲಿ ಬೇರೆ ಯಾರಾದ್ರೂ ಎಂಟ್ರಿ ಕೊಟ್ಟಿರಬಹುದೇ ಎಂಬ ಊಹೆಯನ್ನೂ ಫ್ಯಾನ್ಸ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಮದ್ವೆಯ ಕುರಿತಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಏನಪ್ಪಾ ಅಂದ್ರೆ, ‘ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟಾಗಿರುವ ವಿಚಾರ ಏನಲ್ಲ. ಅವರಿಬ್ಬರೂ ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

RELATED ARTICLES

Latest News