Saturday, April 27, 2024
Homeರಾಷ್ಟ್ರೀಯಮಸೀದಿ, ದರ್ಗಾಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ ಎಂದ ಮೌಲ್ವಿ ವಿಡಿಯೋ ವೈರಲ್

ಮಸೀದಿ, ದರ್ಗಾಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ ಎಂದ ಮೌಲ್ವಿ ವಿಡಿಯೋ ವೈರಲ್

ನವದೆಹಲಿ, ಜ.21- ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್… ಎಲ್ಲರೂ ಮಸೀದಿ, ಮನೆಗಳ ಬಳಿ ದೀಪ ಹಚ್ಚಿ ಭಕ್ತಿಯಿಂದ ರಾಮನಾಮ ಜಪಿಸಿ… ಹೀಗೆ ಕರೆ ಕೊಟ್ಟವರು ಮುಸ್ಲಿಂ ಮೌಲ್ವಿಯೊಬ್ಬರು. ಅವರು ಆಡಿರುವ ಮಾತುಗಳ ವಿಡಿಯೋ ವೈರಲ್ ಆಗಿದ್ದು, ಮರ್ಯಾದಾ ಪುರುಷ ಆದರ್ಶ ಗುಣಗಳ ಶ್ರೀರಾಮಚಂದ್ರ ಎಲ್ಲರ ಆರಾಧ್ಯ ದೈವ. ನಮ್ಮ ಪೂರ್ವಿಕರು ರಾಮನನ್ನು ಪೂಜಿಸುತ್ತಿದ್ದರು.

ಅಯೋಧ್ಯೆಯ ರಾಮಜನ್ಮಸ್ಥಳದಲ್ಲಿ ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ ವಿಧಾನಗಳ ನಡುವೆ ನಾವು ನಮ್ಮ ದರ್ಗಾಗಳಲ್ಲೂ ಕೂಡ ದೀಪ ಹಚ್ಚಿ ನಮಿಸೋಣ ಎಂದು ಭಾರತದಲ್ಲಿರುವ ಎಲ್ಲ ಮುಸಲ್ಮಾನರಿಗೂ ನಾನು ಮನವಿ ಮಾಡುತ್ತೇನೆ.

‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿಯ ‘ಕೆಟಿಎಂ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್

ಮೊಘಲರ ಆಡಳಿತದ ವೇಳೆ ಅದೆಷ್ಟೋ ದೇವಸ್ಥಾನಗಳನ್ನು ಕೆಡವಲಾಗಿತ್ತು ಮತ್ತು ಮಸೀದಿಗಳನ್ನು ಕಟ್ಟಲಾಗಿದೆ. ಇದು ಸತ್ಯ ಘಟನೆಯಾಗಿದ್ದು, ಇದನ್ನು ಮರೆಮಾಚಬಾರದು. ಈಗ ಸಮಯ ಬಂದಿದೆ.

ದೇವಾಲಯದ ಮೇಲೆ ಯಾವ ಯಾವ ಮಸೀದಿಗಳು ಇವೆಯೋ ಅವನ್ನು ಈಗ ನಾವೇ ಖುದ್ದಾಗಿ ತೆರವು ಮಾಡಿಕೊಡಬೇಕು. ಕೆಲವು ನಿಮ್ಮನ್ನು ತಡೆಯಬಹುದು. ಆದರೆ, ವಾಸ್ತವವನ್ನು ಅರಿಯಬೇಕು. ಶ್ರೀರಾಮನನ್ನು ಭಜಿಸುವ ಜತೆಗೆ ದೇವಾಲಯಗಳಿಗೆ ತೆರಳಿ ಭಕ್ತಿಯಿಂದ ದೀಪ ಹಚ್ಚಿ ಎಂದು ಕರೆ ನೀಡಿದ್ದಾರೆ.

RELATED ARTICLES

Latest News