Thursday, May 9, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-01-2024)

ನಿತ್ಯ ನೀತಿ : ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನೋದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಅನ್ನೋದು ಬಹಳ ಮುಖ್ಯ.

ಪಂಚಾಂಗ ಭಾನುವಾರ 21-01-2024

ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ರೋಹಿಣಿ / ಯೋಗ: ಶುಕ್ಲ / ಕರಣ: ವಣಿಜ್

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.15
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ.
ವೃಷಭ: ಎಲ್ಲ ಕೆಲಸ-ಕಾರ್ಯಗಳು ಶೀಘ್ರಗತಿಯಲ್ಲಿ ಮುಗಿಯಲಿವೆ. ಆಭರಣ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
ಮಿಥುನ: ಕಡಿಮೆ ಶ್ರಮದಿಂದ ಕೆಲಸ-ಕಾರ್ಯ ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಕಟಕ: ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ, ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಿ.
ಸಿಂಹ: ಹೆಜ್ಜೆಹೆಜ್ಜೆಗೂ ಅಡೆತಡೆ ಉಂಟಾಗುವುದ ರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ.
ಕನ್ಯಾ: ಅನಗತ್ಯ ವಸ್ತುಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

ತುಲಾ: ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸಿ. ಕೆಲಸದ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳಬೇಕು.
ಧನುಸ್ಸು: ನೀವು ಮಾಡುವ ಕೆಲಸಕ್ಕೆ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯ ಸಿಗಲಿದೆ.

ಮಕರ: ಉದ್ಯೋಗಿಗಳಿಗೆ ಕಠಿಣ ಪರಿಶ್ರಮದಿಂದ ಉತ್ತಮ ಪ್ರತಿಫಲ ಸಿಗಲಿದೆ.
ಕುಂಭ: ಅಧಿಕೃತ ಪ್ರಯಾಣ ಕೈಗೊಳ್ಳುವಿರಿ ಮತ್ತು ಅದರಿಂದ ಪ್ರಯೋಜನ ಸಿಗಲಿದೆ.
ಮೀನ: ಮನೆಯಲ್ಲಿ ಸಂತೃಪ್ತಿಯ ವಾತಾವರಣ ಇರಲಿದೆ. ನಿರೀಕ್ಷೆಗೂ ಮೀರಿದ ವರಮಾನ ಬರುವುದು.

RELATED ARTICLES

Latest News