Tuesday, April 30, 2024
Homeಅಂತಾರಾಷ್ಟ್ರೀಯಮ್ಯಾನ್ಮಾರ್ ಸೇನೆಯ ಹೇಲಿಕಾಫ್ಟರ್ ಹೊಡೆದುರುಳಿಸಿದ ಬಂಡುಕೋರರು

ಮ್ಯಾನ್ಮಾರ್ ಸೇನೆಯ ಹೇಲಿಕಾಫ್ಟರ್ ಹೊಡೆದುರುಳಿಸಿದ ಬಂಡುಕೋರರು

ಬ್ಯಾಂಕಾಕ್, ಜ.4- ಮ್ಯಾನ್ಮಾರ್‍ನ ಮಿಲಿಟರಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಜನಾಂಗೀಯ ಅಲ್ಪಸಂಖ್ಯಾತ ಸಶಸ್ತ್ರ ಗುಂಪು ಉತ್ತರ ರಾಜ್ಯವಾದ ಕಚಿನ್‍ನ ಯುದ್ಧ ವಲಯದಲ್ಲಿ ಮರುಪೂರೈಕೆ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದೆ.

ರಾಜಧಾನಿ ಮೈಟ್ಕಿನಾ ಟೌನ್‍ಶಿಪ್‍ನಲ್ಲಿರುವ ತನ್ನ ನೆಲೆಗೆ ಮರಳಲು ಸೇನಾ ಹೊರಠಾಣೆಯಿಂದ ಹೆಲಿಕಾಪ್ಟರ್ ಟೇಕ್ ಆಫ್ ಮಾಡಿದ ಕೂಡಲೇ ಹೊಡೆದುರುಳಿಸಲಾಗಿದೆ ಎಂದು ಕಚಿನ್ ಸ್ವಾತಂತ್ರ್ಯ ಸೇನೆಯ ವಕ್ತಾರ ಕರ್ನಲ್ ನಾವ್ ಬು ಅಸೋಸಿಯೇಟೆಡ್ ಪ್ರೆಸ್‍ಗೆ ತಿಳಿಸಿದರು.

ಪ್ರತಿರೋಧವನ್ನು ಬೆಂಬಲಿಸುವ ಸ್ವತಂತ್ರ ಆನ್‍ಲೈನ್ ಸುದ್ದಿವಾಹಿನಿ, ಖಿತ್ ಥಿಟ್ ಮೀಡಿಯಾ, ವಿಮಾನದಲ್ಲಿದ್ದ ಆರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಬದುಕುಳಿದಿದ್ದಾರೆ ಎನ್ನಲಾಗಿದೆ. ಆದರೆ ಇತರ ವರದಿಗಳು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿವೆ. ಕ್ರ್ಯಾಶ್ ಸೈಟ್‍ನಿಂದ ಮಿಲಿಟರಿ ಸಮವಸ್ತ್ರದಲ್ಲಿ ಜರ್ಜರಿತ ದೇಹಗಳು ಮತ್ತು ಸುಟ್ಟ ಶವಗಳ ಫೋಟೋಗಳನ್ನು ಸಹ ಖಿತ್ ಥಿಟ್ ಪ್ರಕಟಿಸಿದ್ದಾರೆ.

ಪ್ರಾಣಿಗಳ ಕೊಬ್ಬಿನಿಂದ ತಯಾರಾಗುತ್ತೆ ತುಪ್ಪ..!

ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರದಿಂದ ಅಕಾರವನ್ನು ವಶಪಡಿಸಿಕೊಂಡ ನಂತರ ಫೆಬ್ರವರಿ 2021 ರಲ್ಲಿ ಅಧಿಕಾರಕ್ಕೆ ಬಂದ ಮ್ಯಾನ್ಮಾರ್‍ನ ಮಿಲಿಟರಿ, ಹೆಚ್ಚಿನ ಸ್ವಾಯತ್ತತೆಯನ್ನು ಬಯಸುವ ಸಶಸ್ತ್ರ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳೊಂದಿಗೆ ಸಡಿಲವಾಗಿ ಮೈತ್ರಿ ಮಾಡಿಕೊಂಡಿರುವ ಪ್ರಜಾಪ್ರಭುತ್ವ ಪರ ಪ್ರತಿರೋಧ ಶಕ್ತಿಗಳೊಂದಿಗೆ ಹೋರಾಡುತ್ತಿದೆ.

RELATED ARTICLES

Latest News