Thursday, May 9, 2024
Homeರಾಷ್ಟ್ರೀಯಕೇಜ್ರಿವಾಲ್ ನಡೆ ಟೀಕಿಸಿದ ಬಿಜೆಪಿ

ಕೇಜ್ರಿವಾಲ್ ನಡೆ ಟೀಕಿಸಿದ ಬಿಜೆಪಿ

ನವದೆಹಲಿ, ಜ 4 (ಪಿಟಿಐ) ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಮೂರನೇ ಬಾರಿಗೆ ಸಮನ್ಸ್‍ಗೆ ದೆಹಲಿ ಮುಖ್ಯಮಂತ್ರಿ ತಪ್ಪಿಸಿಕೊಂಡ ನಂತರ ಅರವಿಂದ್ ಕೇಜ್ರಿವಾಲ್ ಅವರು ತನಿಖೆಯಿಂದ ಓಡಿಹೋಗುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಎಎಪಿ ನಾಯಕ ಕೇಜ್ರಿವಾಲ್ ಅವರು, ರಾಜ್ಯಸಭಾ ಚುನಾವಣೆ, ಗಣರಾಜ್ಯೋತ್ಸವದ ಸಿದ್ಧತೆಗಳು ಮತ್ತು ತನಿಖಾ ಸಂಸ್ಥೆಯ ಕೆಲ ವಿಧಾನಗಳ ಅನುಮಾನದಿಂದಾಗಿ ಅದರ ಮುಂದೆ ಹಾಜರಾಗದಿರಲು ಕಾರಣವೆಂದು ಉಲ್ಲೇಖಿಸಿದ್ದಾರೆ.

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‍ದೇವ ಅವರು, ಆಮ್ ಆದ್ಮಿ ಪಕ್ಷದ ನಾಯಕರು ತಮ್ಮ ಸಿಎಂ ಯಾವಾಗ ಬೇಕಾದರೂ ಬಂಧನಕ್ಕೊಳಗಾಗಬಹುದು ಎಂದು ಗಲಾಟೆ ಮಾಡುತ್ತಿದ್ದಾರೆ. ಅವರು ಕಳ್ಳತನ ಮತ್ತು ಭ್ರಷ್ಟಾಚಾರ ಮಾಡಿದ್ದಾರೆ ಮತ್ತು ಈಗ ಅವರು ಗಲಾಟೆ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಕೇಜ್ರಿಗೆ ನಾಲ್ಕನೆ ಸಮನ್ಸ್ ಜಾರಿ ಸಾಧ್ಯತೆ

ತನಿಖಾ ಸಂಸ್ಥೆ ನಿಮಗೆ ಸಾಕ್ಷಿ ಹೇಳಲು ಅವಕಾಶ ನೀಡಿದೆ, ಆದರೆ ನೀವು ಓಡಿಹೋಗಿ ಪರಾರಿಯಾದವರಂತೆ ವರ್ತಿಸುತ್ತಿದ್ದೀರಿ ಎಂದು ಸಚ್‍ದೇವ ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES

Latest News