Monday, September 16, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಸಿಎಂ ವಿರುದ್ಧ ತನಿಖೆಗೆ ಅನುಮತಿ ಖಂಡಿಸಿ ನಾಳೆ ಮೈಸೂರು ಬಂದ್‌

ಸಿಎಂ ವಿರುದ್ಧ ತನಿಖೆಗೆ ಅನುಮತಿ ಖಂಡಿಸಿ ನಾಳೆ ಮೈಸೂರು ಬಂದ್‌

ಮೈಸೂರು, ಆ. 18– ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಶನ್‌ಗೆ ಅನುಮತಿ ಖಂಡಿಸಿ ನಾಳೆ ಮೈಸೂರು ಬಂದ್‌ಗೆ ಅಹಿಂದ ಸಂಘಟನೆ ಕರೆ ನೀಡಿದೆ. ಮೈಸೂರಿನ ಖಾಸಗಿ ಭವನದಲ್ಲಿ ನಡೆದ ಅಹಿಂದ, ಶೋಷಿತ ವರ್ಗ, ಸಿದ್ದರಾಮಯ್ಯ ಅಭಿಮಾನಿಗಳಿಂದ ಪೂರ್ವಭಾವಿ ಸಭೆಯಲ್ಲಿ ಈ ಮೈಸೂರು ಬಂದ್‌ ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹಣ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮುಖಂಡರಾದ ಕೆ.ಎಸ್‌‍. ಶಿವರಾಮ್‌‍, ಸೀತಾರಾಮು, ಶಿವಣ್ಣ, ಬಸವರಾಜು, ಸೇರಿದಂತೆ ಹಲವರು ಭಾಗವಹಿಸಿದ್ದರು. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಹಿನ್ನೆಲೆಯಲ್ಲಿ ನಾಳೆ ಟಿ.ನರಸೀಪುರ ಪಟ್ಟಣ ಬಂದ್‌ಗೆ ನಿರ್ಧಾರ ಕೈಗೊಳ್ಳಲಾಗಿದೆ.

ವರುಣ, ನರಸೀಪುರ, ಬನ್ನೂರು ಬ್ಲಾಕ್‌ ಕಾಂಗ್ರೆಸ್‌‍ ಸಮಿತಿಯಿಂದ ಬಂದ್‌ ಕರೆ ನೀಡಲಾಗಿದೆ. ಬೆಳಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಪಟ್ಟಣ ಬಂದ್‌ಗೆ ನಿರ್ಧರಿಸಲಾಗಿದೆ.

RELATED ARTICLES

Latest News