ಮೈಸೂರು, ಅ. 11- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಅ. 18ರಿಂದ ಯುವ ದಸರಾ ನಡೆಯಲಿದ್ದು ಅ. 23ರಂದು ಏರ್ ಶೋ ಹಮ್ಮಿಕೊಳ್ಳಲಾಗಿದೆ. ದಸರಾ ಸಿದ್ಧತೆ ಕುರಿತು ಅರಮನೆ ಮಂಡಳಿ ಕಚೇರಿಯಲ್ಲಿ ಜಿಲ್ಲಾಕಾರಿ ಡಾ. ಕೆ. ವಿ. ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಐದು ವರ್ಷಗಳ ಬಳಿಕ ದಸರಾ ಮಹೋತ್ಸವದಲ್ಲಿ ಏರ್ ಶೋ ಆಯೋಜಿಸಲಾಗಿದೆ. ಅ. 22ರಂದು ಏರ್ ಶೋ ರಿಹರ್ಸಲ್ ಹಾಗೂ ಅ.23ರಂದು ಪೂರ್ಣಪ್ರಮಾಣದ ಏರ್ ಶೋ ಆಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸಂಜೆ 4 ಗಂಟೆಗೆ ಏರ್ ಶೋ ಆರಂಭವಾಗಲಿದ್ದು, ಒಟ್ಟು 45 ನಿಮಿಷ ಏರ್ ಶೋ ನಡೆಯಲಿದೆ ಎಂದು ಅವರು ತಿಳಿಸಿದರು.
ಪಟಾಕಿ ದುರಂತ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ
ಈ ಬಾರಿ ಬರದ ಪರಿಣಾಮ ಸರ್ಕಾರದ ಮಾರ್ಗಸೂಚಿಯನ್ವಯ ಸಾಂಪ್ರದಾಯಿಕ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಸಿದ್ದತೆ ಮಾಡಲಾಗುತ್ತಿದೆ, ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಚಿಂತನೆಯಿದೆ ಎಂದು ಡಿಸಿ ರಾಜೇಂದ್ರ ಹೇಳಿದರು.
ಎಸ್‍ಪಿ ಸೀಮಾ ಲಾಟ್ಕರ್ ಮಾತನಾಡಿ, ಅ. 18 ರಿಂದ 21ರವರೆಗೆ ಯುವ ದಸರಾ ಆಯೋಜನೆ ಮಾಡಲಾಗಿದ್ದು ಉದ್ಘಾಟನೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ಕನ್ನಡ ಹಿನ್ನೆಲೆ ಗಾಯಕ ಸಂಚಿತ್ ಹೆಗ್ಡೆ ಮತ್ತು ಅವರ ತಂಡ ಯುವ ದಸರಾದಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಸಂಭ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಂಜೆ 6.30 ರಿಂದ ರಾತ್ರಿ 10.30 ರವರಿಗೆ ಯುವ ದಸರಾ ನಡೆಯಲಿದೆ ಎಂದು ಹೇಳಿದರು.
ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’
ಮೊದಲ ದಿನ ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕರಾದ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತ ಸಂಜೆ, ಕನ್ನಡದಾಲ್ ಒಕೆ ತಂಡದಿಂದ ಸಂಗೀತ ಕಾರ್ಯಕ್ರಮ, ಬಾಲಿವುಡ್ ಹಾಡುಗಾರರು ಕೂಡ ಈ ಬಾರಿ ಯುವ ದಸರಾದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೂ ಯುವ ದಸರಾ ಸಂಭ್ರಮದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.