Friday, June 21, 2024
Homeಅಂತಾರಾಷ್ಟ್ರೀಯಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ 'ಅಪರಿಚಿತರು'

ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’

ನವದೆಹಲಿ,ಅ.11- ಪಂಜಾಬ್‍ನ ಪಠಾಣ್‍ಕೋಟ್ ವಾಯುಪಡೆ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್‍ನನ್ನು ಪಾಕಿಸ್ತಾನದ ಗುಜ್ರಾನ್‍ವಾಲಾದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ.

ಶಾಹಿದ್ ಲತೀಫ್ ನಿಷೇಧಿತ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಎಂದೇ ಹೆಸರುವಾಸಿಯಾಗಿದ್ದ. ಪಠಾಣ್‍ಕೋಟ್‍ನಲ್ಲಿ ದಾಳಿ ನಡೆಸಿದ ನಾಲ್ವರು ಉಗ್ರರಲ್ಲಿ ಈತನೇ ಪ್ರಮುಖ ರೂವಾರಿ. ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರನಾಗಿದ್ದ ಈತ ಭಾರತದ ವಿರುದ್ಧ ಯಾವಾಗಲೂ ಪ್ರತಿಕಾರ ತೀರಿಸಿಕೊಳ್ಳಲು ಹವಣಿಸುತ್ತಿದ್ದ.

ಹಮಾಸ್ ಮುಖ್ಯಸ್ಥನ ತಂದೆಯ ಮನೆ ಮೇಲೆ ಇಸ್ರೇಲ್ ದಾಳಿ

ಭಾರತದಲ್ಲಿ 16 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಲತೀಫ್ ಅವರನ್ನು 2010 ರಲ್ಲಿ ವಾಘಾ ಮೂಲಕ ಗಡೀಪಾರು ಮಾಡಲಾಗಿತ್ತು. ಕಳೆದ 1994ರ ನವೆಂಬರ್ 12ರಂದು ಬಂಧಿಸಲಾಗಿತ್ತು. ಲತೀಫ್ ಅವರನ್ನು ಭಾರತ ಸರ್ಕಾರವು ಭಯೋತ್ಪಾದಕ ಎಂದು ಪಟ್ಟಿ ಮಾಡಿತ್ತು. ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯಡಿಯಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಗೆ ಬೇಕಾಗಿದ್ದ.

1994ರಲ್ಲಿ ಶಾಹಿದ್ ಲತೀಫ್ ಅವರನ್ನು ಭಯೋತ್ಪಾದನೆಯ ಆರೋಪದ ಮೇಲೆ ಭಾರತದಲ್ಲಿ ಬಂಧಿಸಲಾಗಿತ್ತು. ನಂತರ 2010ರಲ್ಲಿ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಯಿತು. 1999ರಲ್ಲಿ ಇಂಡಿಯನ್ ಏರ್‍ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಲತೀಫ್ ಕೂಡ ಆರೋಪಿಯಾಗಿದ್ದ. 2016ರ ಜನವರಿ 2ರಂದು ಪಠಾಣ್‍ಕೋಟ್‍ನಲ್ಲಿರುವ ವಾಯುಪಡೆಯ ವಾಯುನೆಲೆ ಮೇಲೆ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು.

ಲತಾ ರಜನಿಕಾಂತ್ ವಿರುದ್ಧದ ಕ್ರಿಮಿನಲ್ ಆರೋಪಕ್ಕೆ ಮರುಜೀವ

ಸುಮಾರು ನಾಲ್ಕು ದಿನಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಏಳು ಭದ್ರತಾ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಗುಂಡಿನ ಚಕಮಕಿಯಲ್ಲಿ ನಾಲ್ವರು ದಾಳಿಕೋರರು ಕೂಡ ಮೃತಪಟ್ಟಿದ್ದರು. ಜನವರಿ 3 ರಂದು, ಐಇಡಿ ಸೋಟದ ನಂತರ ವಾಯುನೆಲೆಯಲ್ಲಿ ಇನ್ನೊಬ್ಬ ಭದ್ರತಾ ಅಧಿಕಾರಿ ಕೊಲ್ಲಲ್ಪಟ್ಟರು. ದಾಳಿಯ ತನಿಖೆಯಲ್ಲಿ ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪಿಗೆ ಸೇರಿದವರು ಎಂದು ತಿಳಿದುಬಂದಿದೆ

RELATED ARTICLES

Latest News