Friday, May 3, 2024
Homeರಾಷ್ಟ್ರೀಯಕಾತ್ಯಾಯಿನಿ ಅಮ್ಮ ಇನ್ನಿಲ್ಲ

ಕಾತ್ಯಾಯಿನಿ ಅಮ್ಮ ಇನ್ನಿಲ್ಲ

ತಿರುವನಂತಪುರಂ, ಅ 11 (ಪಿಟಿಐ) ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅಡಿಯಲ್ಲಿ ಅತ್ಯಂತ ಹಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾತ್ಯಾಯಿನಿ ಅಮ್ಮ ಕರಾವಳಿ ಭಾಗದ ಅಲಪ್ಪುಳ ಜಿಲ್ಲೆಯ ಚೆಪ್ಪಾಡ್ ಗ್ರಾಮದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 101 ವರ್ಷದ ಅಮ್ಮ ಅವರು ಪಾಶ್ರ್ವವಾಯುವಿಗೆ ಒಳಗಾದ ನಂತರ ಸ್ವಲ್ಪ ಸಮಯದವರೆಗೆ ಹಾಸಿಗೆ ಹಿಡಿದಿದ್ದರು ಎಂದು ವರದಿಯಾಗಿದೆ.

ಕಾತ್ಯಾಯಿನಿ ಅಮ್ಮ ಅವರು ದಕ್ಷಿಣ ರಾಜ್ಯದ ಸಾಕ್ಷರತಾ ಮಿಷನ್ ಅಡಿಯಲ್ಲಿ 96 ನೇ ವಯಸ್ಸಿನಲ್ಲಿ ಹಿರಿಯ ವಿದ್ಯಾರ್ಥಿಯಾಗಿ ಮಾತ್ರವಲ್ಲದೆ ನಾಲ್ಕನೇ ತರಗತಿಯ ಸಮಾನ ಪರೀಕ್ಷೆಯಾದ ಅಕ್ಷರಲಕ್ಷಂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಖ್ಯಾತಿಯನ್ನು ಗಳಿಸಿದ್ದರು.

ಅಮ್ಮ ಅವರು ಮಾರ್ಚ್ 2020 ರಲ್ಲಿ ಮಹಿಳಾ ದಿನದಂದು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ನಾರಿ ಶಕ್ತಿ ಪ್ರಶಸ್ತಿಯನ್ನು ಪಡೆದಿದ್ದರು ಅವರು 2019 ರಲ್ಲಿ ಕಾಮನ್‍ವೆಲ್ತ ಆಫ್ ಲರ್ನಿಂಗ್ ಗುಡ್‍ವಿಲ್ ರಾಯಭಾರಿಯಾದರು.

ಚೀನಾಗೆ ನೆರವು ನೀಡಿದ್ದನ್ನು ಒಪ್ಪಿಕೊಂಡ ಅಮೆರಿಕನ್ ನಾವಿಕ

ಆಕೆಯ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಸ್ತಿ ಗೆದ್ದ ನಂತರ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡರು ಮತ್ತು 10 ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ ಹೆಚ್ಚಿನ ಅಧ್ಯಯನ ಮತ್ತು ಉದ್ಯೋಗ ಪಡೆಯುವ ಬಯಕೆ ಹೊಂದಿದ್ದರು.

ಆಧುನಿಕ ಕೇರಳವನ್ನು ರೂಪಿಸಲು ಸಹಾಯ ಮಾಡಿದ ನಮ್ಮ ಸಾಕ್ಷರತಾ ಆಂದೋಲನಕ್ಕೆ ಅವರ ನಿಧನವು ಗಮನಾರ್ಹ ನಷ್ಟವಾಗಿದೆ. ಹೃತ್ಪೂರ್ವಕ ಸಂತಾಪ ಎಂದು ಸಿಎಂ ಹೇಳಿದರು.ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ಕೂಡ ಕಾತ್ಯಾಯನಿ ಅಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

5ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್-ಹಮಾಸ್ ಯುದ್ಧ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್

ಓದಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬೆಳೆದು 96ನೇ ವಯಸ್ಸಿನಲ್ಲಿ ಅಕ್ಷರಸ್ಥಳಾಗಿ ಬೆಳೆದ ಅಮ್ಮ ದೃಢಸಂಕಲ್ಪದ ಪ್ರತೀಕ ಎಂದು ಸಚಿವರು ಬಣ್ಣಿಸಿದ್ದಾರೆ.

RELATED ARTICLES

Latest News