ಮೈಸೂರು, ಅ. 23- ಜಗದ್ವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ ಆರಂಭವಾಗಿದ್ದು, ಸಾಂಸ್ಕøತಿಕ ನಗರಿ ಸಜ್ಜಾಗಿದ್ದು, ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ ಮಧ್ಯಾಹ್ನ 1:46 ರಿಂದ 2.08 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆಯನ್ನು ಅರಮನೆಯ ಬಲದ್ವಾರದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸಲಿದ್ದಾರೆ. ನಂತರ ಅರಮನೆಯ ಆವರಣದಲ್ಲಿ ಸಂಜೆ 4:40 ರಿಂದ ಐದರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ನಾಡು ಅದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಲಿದೆ. ಈ ಅದ್ಭುತ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಅತಿಥಿಗಳಾಗಿ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರುಗಳಾದ ಮಹದೇವಪ್ಪ, ವೆಂಕಟೇಶ್, ಶಿವರಾಜ್ ತಂಗಡಗಿ ಮತ್ತಿತರ ಗಣ್ಯರು ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಶಾಸಕ ಶ್ರೀವತ್ಸ ಅವರು ವಹಿಸಲಿದ್ದಾರೆ.
ಸಂಜೆ ಮೈಸೂರಿನ ಬನ್ನಿಮಂಟಪದಲ್ಲಿ ಮೈನವಿರೇಳಿಸುವ ಪಂಜಿನ ಕವಾಯತು ನಡೆಯಲಿದೆ. ಸಂಜೆ 7:30ಕ್ಕೆ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 30 ಮಂದಿ ಪ್ಯಾಲೆಸ್ತೇನಿಯರ ಸಾವು
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಶಾಸಕ ತನ್ರ್ವೀ ಸೇಟ್ ವಹಿಸಲಿದ್ದಾರೆ.
ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಯುನೆಸ್ಕೋ ದಿಂದ ಗುರುತಿಸಲ್ಪಟ್ಟ ವಿಶ್ವ ಪಾರಂಪರಿಕ ಹೊಯ್ಸಳ ದೇವಸ್ಥಾನ, ಬೇಲೂರು, ಹಳೇಬೀಡು, ಮತ್ತು ಸೋಮನಾಥಪುರ ದೇವಾಲಯ ಮಾದರಿ ಸೇರಿದಂತೆ 49 ಸ್ತಬ್ಧಚಿತ್ರಗಳು ಸಾಗಿ ಬರಲಿವೆ.
ಸ್ತಬ್ಧ ಚಿತ್ರದೊಂದಿಗೆ ಗೊರವರ ಕುಣಿತ, ಪಟ್ಟದಕುಣಿತ, ಕರಡಿ ಕುಣಿತ, ಗಾರುಡಿ ಗೊಂಬೆ ಸೇರಿದಂತೆ 10 ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಜನಮನ ಸೂರೆಗೊಳ್ಳಲಿವೆ. ಈ ಬಾರಿಯ ಜಂಬೂಸವಾರಿಯ ಮೆಳವಣಿಗೆಯಲ್ಲಿ ರಾಜರ ಕಾಲದ ಗತವೈಭವ ಮರುಕಳಿಸಲಿದೆ. ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಸುತ್ತ ರಾಜ ಪೋಷಾಕು ಧರಿಸಿದ 200 ಮಂದಿ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.
ಗೋವಾದ ವಿಮಾನ ನಿಲ್ದಾಣದಲ್ಲಿ 4 ಕೋಟಿ ಮೌಲ್ಯದ ಚಿನ್ನ, ಐಫೋನ್ ವಶ
ರಾಜರ ಕಾಲದ ಸೈನಿಕರು ವಿವಿಧ ಲಾಂಛನ ಹಿಡಿದು ಬರುತ್ತಿದ್ದ ಹಾಗೆ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ವಿವಿಧ ಲಾಂಛನಗಳನ್ನು ನೋಡುವ ಭಾಗ್ಯ ನಮ್ಮದಾಗಲಿದೆ. ಮೆರವಣಿಗೆಯಲ್ಲಿ ಸಾಗಲು ಸೂರ್ಯ, ನೀರು, ವರಹ ಚಂದ್ರ ಮಂಡಲ ಗರುಡ, ಮಾರುತಿ ತ್ರಿಶೂಲ ಸೇರಿದಂತೆ ಇನ್ನೂ ಹತ್ತು ಹಲವು ಲಾಂಛನಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಹಿಡಿದು ರಾಜರ ಕಾಲದಲ್ಲಿ ಹೊತ್ತು ಬರುವ ಮಾದರಿಯಲ್ಲಿ ಈ ಬಾರಿ ಮೆರವಣಿಗೆಯಲ್ಲಿ ಸಾಗಿ ಬರುವುದು ವಿಶೇಷವಾಗಿದೆ ಗತಕಾಲದ ದಸರಾ ಮೆರವಣಿಗೆಯನ್ನು ನೆನಪಿಸಲಿದೆ.
ಈ ಬಾರಿಯ ದಸರಾ ಉತ್ಸವವನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಆಗಮಿಸಲಿದ್ದಾರೆ. ಮುಂಜಾಗ್ರತ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.