Saturday, August 9, 2025
Homeರಾಜ್ಯನಮ್ಮ ಕ್ಲಿನಿಕ್‌ಗಳಿಗೆ ಬೀಳುತ್ತಾ ಬೀಗ..?

ನಮ್ಮ ಕ್ಲಿನಿಕ್‌ಗಳಿಗೆ ಬೀಳುತ್ತಾ ಬೀಗ..?

Namma Clinics are being closed.?

ಬೆಂಗಳೂರು, ಜೂ.21– ಬಡವರ ಚಿಕಿತ್ಸೆಗೆ ನೆರವಾಗಲಿ ಎಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ನಮ ಕ್ಲಿನಿಕ್‌ಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಬಂದೋದಗಿದೆ. ನಮ ಕ್ಲಿನಿಕ್‌ಗಳನ್ನು ಆರಂಭಿಸಿದ ದಿನದಿಂದಲೂ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಲೆ ಇದೆ. ಅಂತಹ ಕ್ಲಿನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಸಿಗುತ್ತಿಲ್ಲ. ಸರ್ಕಾರದ ಈ ಧೋರಣೆಯಿಂದ ಬೇಸತ್ತಿರುವ ಸಿಬ್ಬಂದಿಗಳು ಮುಂದಿನ ತಿಂಗಳು ಬಾಕಿ ಇರುವ ಸಂಬಳ ಪಾವತಿಸದಿದ್ದರೆ ಕ್ಲಿನಿಕ್‌ಗಳನ್ನು ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಗರದಲ್ಲಿ ಒಟ್ಟು 140 ಕ್ಕೂ ಹೆಚ್ಚು ನಮ್ಮ ಕ್ಲಿನಿಕ್‌ಗಳು ಇವೆ. ಇಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.ಬಡವರಿಗೆ, ಕೂಲಿ ಕಾರ್ಮಿಕರಿಗೆ ಉಚಿತ ಚಿಕಿತ್ಸೆಸಿಗಲಿ ಎಂಬ ಉದ್ದೇಶದಿಂದ ಓಪನ್‌ ಅಗಿದ ನಮ್ಮ ಕ್ಲಿನಿಕ್‌ಗಳಿಗೆ ಇದೀಗ ಬೀಗ ಜಡಿಯುವ ಪರಿಸ್ಥಿತಿ ಬಂದಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾದ ನಮ ಕ್ಲಿನಿಕ್‌ ಕಾನ್ಸೆಪ್‌್ಟಗೆ ಹಾಲಿ ಕಾಂಗ್ರೆಸ್‌‍ ಸಹಕಾರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿಂದೆ ಕಾಂಗ್ರೆಸ್‌‍ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟಿನ್‌ಗಳ ಬಗ್ಗೆ ಅಂದಿನ ಬಿಜೆಪಿ ಸರ್ಕಾರ ಉದಾಸೀನ ತೋರಿತ್ತು. ಈಗ ಇರುವ ಕಾಂಗ್ರೆಸ್‌‍ ಸರ್ಕಾರವೂ ಅದೇ ಧೋರಣೆಯನ್ನು ಮುಂದುವರೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌‍ ಸರ್ಕಾರ ನಮಗೆ ಸಂಬಳ ನೀಡಲು ಮೀನಾಮೇಷ ಎಣಿಸುತ್ತಿದೆ. ಇದೇ ಧೋರಣೆ ಮುಂದುವರೆದರೆ ನಾವು ಮುಂದಿನ ತಿಂಗಳಿನಿಂದ ಕ್ಲಿನಿಕ್‌ ತೆರೆಯಲ್ಲ ಎನ್ನುತ್ತಿದ್ದಾರೆ ಅಲ್ಲಿನ ಸಿಬ್ಬಂದಿಗಳು.

RELATED ARTICLES

Latest News