ನವದೆಹಲಿ, ಡಿ.17- ಕಳೆದ 2014 ರಿಂದ ಇಲ್ಲಿಯವರೆಗೆ 23 ಸಾವಿರಕ್ಕೂ ಹೆಚ್ಚು ಒಳನುಸುಳುಕೋರರನ್ನು ಬಂಧಿಸಲಾಗಿದೆ. ಆದರೆ, ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವಿಕೆ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಅವಧಿಯಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನಾರ್, ನೇಪಾಳ ಮತ್ತು ಭೂತಾನ್ ಜೊತೆಗಿನ ಭಾರತದ ಗಡಿಗಳಲ್ಲಿ 23,926 ಒಳನುಸುಳುಕೊರರನ್ನು ಬಂಧಿಸಿವೆ ಅದರಲ್ಲೂ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅತಿ ಹೆಚ್ಚು ಶಂಕೆ ಪ್ರಕರಣಗಳ ನಡೆದಿರುವುದು ಬಹಿರಂಗವಾಗಿದೆ.
ನಂತರದ ಸ್ಥಾನಗಳಲ್ಲಿ ಮ್ಯಾನಾರ್, ಪಾಕಿಸ್ತಾನ ಮತ್ತು ನೇಪಾಳ-ಭೂತಾನ್ ಗಡಿಗಳಿವೆ. 2014 ರಿಂದ ವರ್ಷವಾರು ಸಂಗ್ರಹಿಸಲಾದ ಅಂಕಿಅಂಶಗಳು, ಭಾರತದ ಪಶ್ಚಿಮ ಮತ್ತು ಪೂರ್ವ ಗಡಿಗಳಲ್ಲಿ ನಿರಂತರ ಒಳನುಸುಳುವಿಕೆ ಪ್ರಯತ್ನಗಳನ್ನು ಸೂಚಿಸುತ್ತವೆ, ಆದರೆ ಚೀನಾದೊಂದಿಗಿನ ಉತ್ತರ ಗಡಿಯು ವರದಿಯಾದ ಒಳನುಸುಳುವಿಕೆ ಪ್ರಕರಣಗಳಿಂದ ಮುಕ್ತವಾಗಿದೆ.
ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರಾದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಮತ್ತು ಶರ್ಮಿಳಾ ಸರ್ಕಾರ್ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರವಾಗಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವರ್ಷವಾರು ಡೇಟಾವನ್ನು ಹಂಚಿಕೊಂಡಿದ್ದಾರೆ.
2014 ರಿಂದ 2024 ರವರೆಗೆ ಬಾಂಗ್ಲಾದೇಶ, ಮ್ಯಾನಾರ್, ಪಾಕಿಸ್ತಾನ ಮತ್ತು ನೇಪಾಳ-ಭೂತಾನ್ ಜೊತೆಗಿನ ಭಾರತದ ಅಂತರರಾಷ್ಟ್ರೀಯ ಗಡಿಗಳಲ್ಲಿ ಒಟ್ಟು 20,806 ಒಳನುಸುಳುವವರನ್ನು ಬಂಧಿಸಲಾಗಿದೆ ಮತ್ತು ಜನವರಿ ಮತ್ತು ನವೆಂಬರ್ 2025 ರ ನಡುವೆ ಈ ಗಡಿಗಳಿಂದ 3,120 ಒಳನುಸುಳುವವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗರಿಷ್ಠ 18,851 ಒಳನುಸುಳುವವರನ್ನು ಬಂಧಿಸಲಾಗಿದೆ, ನಂತರ ಭಾರತ-ಮ್ಯಾನ್ಮಾರ್ ಗಡಿಯಲ್ಲಿ 1,165, ಭಾರತ-ಪಾಕಿಸ್ತಾನ ಗಡಿಯಲ್ಲಿ 556 ಮತ್ತು ಭಾರತ-ನೇಪಾಳ-ಭೂತಾನ್ ಗಡಿಗಳಲ್ಲಿ 234 ಜನರನ್ನು ಬಂಧಿಸಲಾಗಿದೆ ಎಂದು ದತ್ತಾಂಶ ತೋರಿಸುತ್ತದೆ.
2025 ರಿಂದ ನವೆಂಬರ್ ವರೆಗಿನ ತಿಂಗಳವಾರು ದತ್ತಾಂಶವು, ವಿಶೇಷವಾಗಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ (2,556), ಭಾರತ-ಮ್ಯಾನ್ಮಾರ್ ಗಡಿಯಲ್ಲಿ (437), ಭಾರತ-ಪಾಕಿಸ್ತಾನ ಗಡಿಯಲ್ಲಿ (49), ಮತ್ತು ಭಾರತ-ನೇಪಾಳ-ಭೂತಾನ್ ಗಡಿಗಳಲ್ಲಿ (78) ಒಳನುಸುಳುವವರ ಬಂಧನ ಮುಂದುವರೆದಿದೆ ಎಂದು ತೋರಿಸುತ್ತದೆ. 2025 ರಲ್ಲಿಯೂ ಸಹ ಭಾರತ-ಚೀನಾ ಗಡಿಯಲ್ಲಿ ಯಾವುದೇ ಒಳನುಸುಳುವವರ ಬಗ್ಗೆ ವರದಿಯಾಗಿಲ್ಲ ಎಂದು ದತ್ತಾಂಶವು ಪುನರುಚ್ಚರಿಸಿದೆ, ಇದು ಉತ್ತರ ಗಡಿಯಲ್ಲಿನ ವಿಶಿಷ್ಟ ಭದ್ರತಾ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
