Homeರಾಷ್ಟ್ರೀಯರಾಜಸ್ಥಾನ : ಕೆಟ್ಟು ನಿಂತಿದ್ದ ಬಸ್‌‍ಗೆ ಟ್ರಕ್‌ ಡಿಕ್ಕಿಯಾಗಿ ಮೂವರ ದುರ್ಮರಣ

ರಾಜಸ್ಥಾನ : ಕೆಟ್ಟು ನಿಂತಿದ್ದ ಬಸ್‌‍ಗೆ ಟ್ರಕ್‌ ಡಿಕ್ಕಿಯಾಗಿ ಮೂವರ ದುರ್ಮರಣ

3 killed, 3 injured as speeding truck rams stationary bus on Jaipur-Ajmer highway

ಜೈಪುರ, ಜೂ. 29 (ಪಿಟಿಐ) ರಾಜಸ್ಥಾನದ ದುಡು ಬಳಿ ಜೈಪುರ-ಅಜ್ಮೀರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಟ್ರಕ್‌ ನಿಂತಿದ್ದ ಖಾಸಗಿ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಖಂಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಸುಮಾರು 20 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಚಿತ್ತೋರ್‌ಗಢದಿಂದ ಜೈಪುರಕ್ಕೆ ಹೋಗುತ್ತಿದ್ದ ಬಸ್‌‍ನ ಆಕ್ಸಲ್‌ ಮುರಿದು ಯಾಂತ್ರಿಕ ದೋಷ ಕಾಣಿಸಿಕೊಂಡು ಚಾಲಕ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಬೇಕಾಯಿತು.

ಹಿಂದೆ ಬಂದ ಟ್ರಕ್‌ ನಿಂತಿದ್ದ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌‍ ಬಳಿ ನಿಂತಿದ್ದ ಮಧುರಾಜ್‌ (30), ರಾಹುಲ್‌ (29) ಮತ್ತು ಬಸ್‌‍ ಚಾಲಕ ಸತಾರಾಮ್‌ (30) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಮೂವರು ಜನರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES
spot_img

Latest News