ನವದೆಹಲಿ,ಜು.25–ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಕ್ರಮಗಳ ಕುರಿತಾದ ವೀಡಿಯೊ ರೀಲ್, ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಕೇವಲ 24 ಗಂಟೆಗಳ ಅಂತರದಲ್ಲಿ 303 ಮಿಲಿಯನ್ ವೀಕ್ಷಣೆಗಳನ್ನು ದಾಟುವ ಮೂಲಕ ಇದು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದ ರೀಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶಾದ್ಯಂತ ಸ್ಪರ್ಧಾತಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಹಾಗೂ ಆಕ್ರೋಶದ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಸಾಮಾಜಿಕ ಮಾಧ್ಯಮ ಮೈಲಿಗಲ್ಲು ಅತ್ಯಂತ ಮಹತ್ವಪೂರ್ಣವಾಗಿದೆ.
ಕೇವಲ 24 ಗಂಟೆಗಳಲ್ಲಿ 303 ಮಿಲಿಯನ್ (30.3 ಕೋಟಿ) ವೀಕ್ಷಣೆಗಳನ್ನು ಪಡೆದು ಇನ್ಸ್ಟಾಗ್ರಾಮ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ರೀಲ್.
ಫಿಫಾ ವಿಶ್ವಕಪ್ ಸಮಯದಲ್ಲಿ ಬಿಟಿಎಸ್ ಜೊತೆಗಿನ ಭೇಟಿಯ ವೀಡಿಯೊಗಾಗಿ ಶೋಸ್ಪೀಡ್ ಹೊಂದಿದ್ದ 300 ಮಿಲಿಯನ್ ವೀಕ್ಷಣೆಗಳ ಹಿಂದಿನ ದಾಖಲೆಯನ್ನು ಈ ರೀಲ್ ಮುರಿದೆ. ಈ ವೀಡಿಯೊ 16 ಮಿಲಿಯನ್ಗಿಂತಲೂ ಹೆಚ್ಚು ಲೈಕ್್ಸ, 1.5 ಮಿಲಿಯನ್ ಕಾಮೆಂಟ್ಗಳನ್ನು ಪಡೆದುಕೊಂಡಿದ್ದು, ರಾತ್ರೋರಾತ್ರಿ ಸುಮಾರು 1 ಮಿಲಿಯನ್ ಹೊಸ ಫಾಲೋವರ್ಸ್ಗಳು ಸೇರ್ಪಡೆಯಾಗಿದ್ದಾರೆ.
