Homeರಾಷ್ಟ್ರೀಯಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, 8 ಮಂದಿ ಸಾವು

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, 8 ಮಂದಿ ಸಾವು

8 killed in horrific road accident in Uttar Prade

ಲಖಿಂಪುರ್‌ ಖೇರಿ,ಮೇ.18: ಉತ್ತರ ಪ್ರದೇಶದ ಸಿಸಯ್ಯಲಖಿಂಪುರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.

ಲಖಿಂಪುರ್‌ನಿಂದ ಸಿಸಯ್ಯ ಕಡೆಗೆ ತೆರಳುತ್ತಿದ್ದ ವ್ಯಾನ್‌‍, ಉಂಚಗಾಂವ್‌ ಮತ್ತು ಭರೆಹ್ತಾ ಗ್ರಾಮಗಳ ಮಧ್ಯೆ ಟ್ರಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಧೌರಹ್ರಾ ವಲಯಾಧಿಕಾರಿ ಶಂಶೇರ್‌ ಬಹಾದುರ್‌ ಸಿಂಗ್‌ ತಿಳಿಸಿದ್ದಾರೆ.

RELATED ARTICLES

Latest News