ವಾಷಿಂಗ್ಟನ್, ಮೇ.18- ಏರ್ ಶೋ ವೇಳೆ ಅಮೆರಿಕದ ಎರಡು ಯುದ್ಧ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ ಪತನಗೊಂಡಿದ್ದು, ವಿಮಾನಗಳಲ್ಲಿ ಇದ್ದ ನಾಲ್ಕು ಸಿಬ್ಬಂದಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಅಮೆರಿಕದ ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪ್ರದೇಶವನ್ನು ತಕ್ಷಣವೇ ಲಾಕ್ಡೌನ್ ಮಾಡಲಾಗಿದೆ. ವಿಪರೀತ ಗಾಳಿಯಿಂದ ನಿಯಂತ್ರಣ ತಪ್ಪಿ ಎರಡು ಇಜಿಎ-18ಜಿ ಗ್ರೋಲರ್ಒಂದು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ತಕ್ಷಣವೇ ವಿಮಾನ ಹಾನಿಗೀಡಾಗಿ ಆಕಾಶದಲ್ಲಿ ಬೆಂಕಿ ಉಂಡೆಗಳು ಚಿಮ್ಮಿವೆ.
ಎರಡು ವಿಮಾನಗಳು ಅಮೆರಿಕದ ವಾಯುನೆಲೆಯಿಂದ ಸುಮಾರು 2 ಮೈಲಿಗಳಷ್ಟು ದೂರದಲ್ಲಿ ಅಪಘಾತಕ್ಕೀಡಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪಡೆಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯನ್ನು ಮೇಲ್ವಿಚಾರಣೆ ನಡೆಸಯುತ್ತಿವೆ. ಜೊತೆಗೆ ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂಬುದನ್ನ ಪತ್ತೆ ಮಾಡುತ್ತಿವೆ.
ಆಕಾಶದಲ್ಲೇ ಉರಿದ ವಿಮಾನ, ಪೈಲಟ್ ಸೇಫ್ಇನ್ನೂ ಫೈಟರ್ ಜೆಟ್ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಆಗಸದಲ್ಲೇ ಹೊತ್ತಿ ಉರಿದರೂ, ಫೈಟರ್ ಪೈಲಟ್ ಸೇರಿ ನಾಲ್ವರು ಸಿಬ್ಬಂದಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ.
ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿರುವುದು ಇದೇ ಮೊದಲೇನಲ್ಲ. 2018 ರಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ರನ್ವೇಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು, 2003 ರಲ್ಲಿ, ಥಂಡರ್ಬರ್ಡ್ ಜೆಟ್ ಅಪಘಾತಕ್ಕೀಡಾಗಿತ್ತು. ಆದ್ರೆ ಪೈಲಟ್ ಸುರಕ್ಷಿತವಾಗಿದ್ದರು.
