Homeರಾಷ್ಟ್ರೀಯಪ್ರಧಾನಿ ಮೋದಿ ಭೇಟಿ ಮಾಡಿದ ಅಮೆಜಾನ್‌ ಸಿಇಒ, ಭಾರತದಲ್ಲಿ 48 ಬಿಲಿಯನ್‌ ಡಾಲರ್‌ ಹೂಡಿಕೆ ಘೋಷಣೆ

ಪ್ರಧಾನಿ ಮೋದಿ ಭೇಟಿ ಮಾಡಿದ ಅಮೆಜಾನ್‌ ಸಿಇಒ, ಭಾರತದಲ್ಲಿ 48 ಬಿಲಿಯನ್‌ ಡಾಲರ್‌ ಹೂಡಿಕೆ ಘೋಷಣೆ

Amazon CEO Andy Jassy meets PM Modi

ಬೆಂಗಳೂರು, ಜೂ.26- ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಅಮೆಜಾನ್‌ ಸಿಇಒ ಆ್ಯಂಡಿಜಾಸ್ಸಿ ಭಾರತದಲ್ಲಿ 48 ಬಿಲಿಯನ್‌ ಡಾಲರ್‌ ಹೂಡಿಕೆ ಘೋಷಣೆ ಮಾಡಿದ್ದಾರೆ.
ಅಮೆಜಾನ್‌ ಭಾರತದಲ್ಲಿ ನೂರಕ್ಕೂ ಹೆಚ್ಚು ಹರ್ಬನ್‌ ಫುಲ್‌ಫಿಲ್‌ಮೆಂಟ್‌ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತನ್ನ ತ್ವರಿತ ವಾಣಿಜ್ಯಜಾಲವನ್ನು ವಿಸ್ತರಿಸುತ್ತಿದೆ.

ಸಿಇಒ ಆ್ಯಂಡಿಜಾಸ್ಸಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ದೇಶದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್‌ ಮೂಲಸೌಕರ್ಯಕ್ಕಾಗಿ ಬೃಹತ್‌ ಹೂಡಿಕೆ ಘೋಷಿಸಿದ್ದು, ಇದು ಉದ್ಯೋಗಸೃಷ್ಟಿ ಮತ್ತು ರಫ್ತಿಗೆ ಉತ್ತೇಜನ ನೀಡಲಿದೆ.

ಜಾಗತಿಕ ಇ ಕಾಮರ್ಸ್‌ ದೈತ್ಯ ಅಮೆಜಾನ್‌ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯಜಾಲವನ್ನು ಕ್ಷಿಪ್ರವೇಗದಲ್ಲಿ ವಿಸ್ತರಿಸಲು ಮುಂದಾಗಿದೆ.ಗ್ರಾಹಕರ ದೈನಂದಿನ ಅಗತ್ಯತೆಗಳನ್ನು ಕೆಲವೇ ನಿಮಿಷಗಳಲ್ಲಿ ಪೂರೈಸುವ ನಿಟ್ಟಿನಲ್ಲಿ ದೇಶಾದ್ಯಂತ ನೂರಕ್ಕೂ ಹೆಚ್ಚು ವಿಶೇಷ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ.

ಮುಂದಿನ ಐದು ವರ್ಷಗಳಲ್ಲಿ 48 ಶತಕೋಟಿ ಅಮೆರಿಕನ್‌ ಡಾಲರ್‌ಗಳಿಗೂ ಹೆಚ್ಚು ಹೂಡಿಕೆ ಮಾಡುವ ಯೋಜನೆಯನ್ನು ಕೂಡ ಘೋಷಿಸಿದರು. 2010 ರಿಂದ 2030ರವರೆಗೆ ಭಾರತದಲ್ಲಿ ಅಮೆಜಾನ್‌ 88 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಹೂಡಿಕೆ ಮಾಡಿವೆ.

RELATED ARTICLES
spot_img

Latest News