Homeರಾಷ್ಟ್ರೀಯದೇಶಾದ್ಯಂತ ಕೋಟ್ಯಂತರ PNG ಗ್ರಾಹಕರಿಗೆ ಬಿಗ್‌ ಶಾಕ್‌..!

ದೇಶಾದ್ಯಂತ ಕೋಟ್ಯಂತರ PNG ಗ್ರಾಹಕರಿಗೆ ಬಿಗ್‌ ಶಾಕ್‌..!

Big shock for crores of PNG consumers across the country..!

ನವದೆಹಲಿ,ಜೂ.6- ದೇಶಾದ್ಯಂತ ಇರುವ ಕೋಟ್ಯಂತರ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರವು ಜೂನ್‌ 2026ರಿಂದ ಅನ್ವಯವಾಗುವಂತೆ ಬಿಗ್‌ ಶಾಕ್‌ ನೀಡಿದೆ. ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ದುರುಪಯೋಗವನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ

ಒಂದು ಮನೆಗೆ ಒಂದೇ ಕನೆಕ್ಷನ್‌ ನೀತಿ :
ದೇಶದಲ್ಲಿ ಅಡುಗೆ ಅನಿಲದ ಕಪ್ಪು ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನನ್ನು ತಡೆಗಟ್ಟಲು ಸರ್ಕಾರವು ಒಂದು ಮನೆ, ಒಂದು ಗ್ಯಾಸ್‌‍ ಸಂಪರ್ಕ ನಿಯಮವನ್ನು ಕಡ್ಡಾಯಗೊಳಿಸುತ್ತಿದೆ. ತೈಲ ಕಂಪನಿಗಳು ಒಂದೇ ವಿಳಾಸದಲ್ಲಿ ಎಲ್‌ಪಿಜಿ ಸಿಲಿಂಡರ್‌ ಮತ್ತು ಪೈಪ್ಡ್ ಗ್ಯಾಸ್‌‍ ಎರಡನ್ನೂ ಹೊಂದಿರುವ ಗ್ರಾಹಕರನ್ನು ಪತ್ತೆಹಚ್ಚುತ್ತಿವೆ. ಪೈಪ್ಡ್ ಗ್ಯಾಸ್‌‍ ಸೌಲಭ್ಯವಿರುವ ಪ್ರದೇಶಗಳಲ್ಲಿನ ಜನರು ಸಂಪೂರ್ಣವಾಗಿ ಪಿಎನ್‌ಜಿಗೆ ಬದಲಾಗುವಂತೆ ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಪಿಎನ್‌ಜಿ ಬಳಕೆದಾರರಿಗೆ ಸಿಲಿಂಡರ್‌ ಬುಕ್ಕಿಂಗ್‌ ರದ್ದು :
ಯಾವ ಮನೆಗಳಲ್ಲಿ ಈಗಾಗಲೇ ಸಕ್ರಿಯ ಪಿಎನ್‌ಜಿ ಸಂಪರ್ಕವಿದೆಯೋ, ಅಂತಹ ಗ್ರಾಹಕರು ಇನ್ಮುಂದೆ ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಅಥವಾ ಹಳೆಯ ಸಿಲಿಂಡರ್‌ಗಳನ್ನು ರೀಫಿಲ್‌ ಬುಕ್‌ ಮಾಡಲು ಅರ್ಹರಾಗಿರುವುದಿಲ್ಲ. ಇದಕ್ಕಾಗಿ ತೈಲ ಕಂಪನಿಗಳು ಮತ್ತು ಸಿಟಿ ಗ್ಯಾಸ್‌‍ ವಿತರಕರು ತಮ್ಮ ಗ್ರಾಹಕರ ದತ್ತಾಂಶವನ್ನು ಒಂದಕ್ಕೊಂದು ಲಿಂಕ್‌ ಮಾಡಿದ್ದಾರೆ. ಪೈಪ್‌್ಡ ಗ್ಯಾಸ್‌‍ ಲಭ್ಯವಿರುವ ಕಡೆ ಸಿಲಿಂಡರ್‌ ಬಳಕೆಯನ್ನು ಕಡಿಮೆ ಮಾಡಿ, ಗ್ಯಾಸ್‌‍ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಿಲಿಂಡರ್‌ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

30 ದಿನಗಳ ಒಳಗಾಗಿ ಎಲ್‌ಪಿಜಿ ಸರೆಂಡರ್‌ ಕಡ್ಡಾಯ :
ಲಿಕ್ವಿಫೈಡ್‌ ಪೆಟ್ರೋಲಿಯಂ ಗ್ಯಾಸ್‌‍ ತಿದ್ದುಪಡಿ ಕಾಯ್ದೆ 2026ರ ಅನ್ವಯ, ನಿಮ ಮನೆಗೆ ಪಿಎನ್‌ಜಿ ಗ್ಯಾಸ್‌‍ ಸಂಪರ್ಕ ಕಲ್ಪಿಸಿದ 30 ದಿನಗಳ ಒಳಗಾಗಿ ನೀವು ಹೊಂದಿರುವ ಹಳೆಯ ಎಲ್‌ಪಿಜಿ ಸಂಪರ್ಕವನ್ನು ಅಧಿಕೃತವಾಗಿ ರದ್ದುಗೊಳಿಸಬೇಕು. ಒಂದೇ ಸೂರಿನಡಿ ಎರಡು ನಿಯಮಬಾಹಿರ ಸಂಪರ್ಕಗಳು ಇರುವುದನ್ನು ತಡೆಯಲು ಈ ಗಡುವನ್ನು ವಿಧಿಸಲಾಗಿದೆ.

ಭವಿಷ್ಯದ ಬಳಕೆಗಾಗಿ ಟ್ರಾನ್‌್ಸಫರ್‌ ವೋಚರ್‌ ಸೌಲಭ್ಯ ಪಿಎನ್‌ಜಿ ಸಂಪರ್ಕ ಪಡೆದ ನಂತರ ಎಲ್‌ಪಿಜಿ ಸರೆಂಡರ್‌ ಮಾಡುವ ಗ್ರಾಹಕರಿಗೆ ಸರ್ಕಾರ ಒಂದು ವಿಶೇಷ ವಿನಾಯಿತಿ ನೀಡಿದೆ. ಗ್ಯಾಸ್‌‍ ಸರೆಂಡರ್‌ ಮಾಡುವಾಗ ಕಂಪನಿಯು ನಿಮಗೆ ಟ್ರಾನ್‌್ಸಫರ್‌ ವೋಚರ್‌ ನೀಡುತ್ತದೆ. ಭವಿಷ್ಯದಲ್ಲಿ ನೀವು ಪಿಎನ್‌ಜಿ ಸೌಲಭ್ಯವಿಲ್ಲದ ಬೇರೆ ಊರು ಅಥವಾ ಮನೆಗೆ ವರ್ಗಾವಣೆಯಾದರೆ, ಅದೇ ವೋಚರ್‌ ಬಳಸಿ ಯಾವುದೇ ಹೊಸ ಶುಲ್ಕವಿಲ್ಲದೆ ತಕ್ಷಣವೇ ಎಲ್‌ಪಿಜಿ ಸಂಪರ್ಕವನ್ನು ಮರು ಸ್ಥಾಪಿಸಿಕೊಳ್ಳಬಹುದು. ಇದು ಬಾಡಿಗೆದಾರರಿಗೆ ಮತ್ತು ವರ್ಗಾವಣೆಗೊಳ್ಳುವ ನೌಕರರಿಗೆ ಸಹಕಾರಿಯಾಗಿದೆ.

ಬುಕಿಂಗ್‌ ಅವಧಿಯ ನಿಯಮದಲ್ಲಿ ಬದಲಾವಣೆ ಇಲ್ಲ :
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಲಿಂಡರ್‌ ಬುಕಿಂಗ್‌ ಮಾಡುವ ದಿನಗಳ ಅಂತರವನ್ನು ಬದಲಾಯಿಸಲಾಗಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬುಕಿಂಗ್‌ ನಿಯಮ ಅಥವಾ ಕಾಲಾವಕಾಶದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದೆ. ಹಳೆಯ ನಿಯಮಗಳ ಪ್ರಕಾರವೇ ಗ್ರಾಹಕರು ಎಂದಿನಂತೆ ಸಿಲಿಂಡರ್‌ ಬುಕ್‌ ಮಾಡಬಹುದು.

ವದಂತಿಗಳನ್ನು ನಂಬದಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ನೀವು ಈಗಾಗಲೇ ಪಿಎನ್‌ಜಿ ಸಂಪರ್ಕ ಹೊಂದಿದ್ದರೆ, ತಕ್ಷಣವೇ ನಿಮ ಎಲ್‌ಪಿಜಿ ಡಿಸ್ಟ್ರಿಬ್ಯೂಟರ್‌ ಸಂಪರ್ಕಿಸಿ ಸ್ಟೇಟಸ್‌‍ ಪರಿಶೀಲಿಸಿಕೊಳ್ಳಿ. ಕೇವಲ ಎಲ್‌ಪಿಜಿ ಸಿಲಿಂಡರ್‌ ಬಳಸುವ ಸಾಮಾನ್ಯ ಗ್ರಾಹಕರಿಗೆ ಈ ನಿಯಮಗಳಿಂದ ಯಾವುದೇ ತೊಂದರೆಯಾಗುವುದಿಲ್ಲ, ಅವರು ಎಂದಿನಂತೆ ತಮ ಬುಕಿಂಗ್‌ ಮುಂದುವರಿಸಬಹುದು.

RELATED ARTICLES

Latest News