Thursday, April 16, 2026
Homeರಾಷ್ಟ್ರೀಯಬಾಂಬ್‌ ಬೆದರಿಕೆ : ಪಾಟ್ನಾ-ನವದೆಹಲಿ ಎಕ್ಸ್ ಪ್ರೆಸ್‌‍ ರೈಲಿನಲ್ಲಿ ತೀವ್ರ ತಪಾಸಣೆ

ಬಾಂಬ್‌ ಬೆದರಿಕೆ : ಪಾಟ್ನಾ-ನವದೆಹಲಿ ಎಕ್ಸ್ ಪ್ರೆಸ್‌‍ ರೈಲಿನಲ್ಲಿ ತೀವ್ರ ತಪಾಸಣೆ

Bomb scare: Delhi-Patna Tejas Rajdhani halted briefly; nothing suspicious found

ನವದೆಹಲಿ,ಜ.18- ಪಾಟ್ನಾ-ನವದೆಹಲಿ 12309 ತೇಜಸ್‌‍ ರಾಜಧಾನಿ ಎಕ್‌್ಸಪ್ರೆಸ್‌‍ ರೈಲ್‌ನಲ್ಲಿ ಬಾಂಬ್‌ ಇರುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರೈಲಿನಲ್ಲಿ ಅನುಮಾನಾಸ್ಪದ ವಸ್ತುವಿನ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ರೈಲ್ವೆ ನಿಯಂತ್ರಣ ಕೊಠಡಿಗೆ ಬಂದ ಮಾಹಿತಿಯನ್ನು ಆಧರಿಸಿ ರೈಲನ್ನು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ (ಡಿಡಿಯು) ಜಂಕ್ಷನ್‌ನಲ್ಲಿ ನಿಲ್ಲಿಸಿ ತಪಾಸಣೆ ಕೈಗೊಳ್ಳಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಸಿ ಬಾಂಬ್‌ ಸ್ಕ್ವಾಡ್‌, ಶ್ವಾನ ದಳ, ಬಾಂಬ್‌ ನಿಷ್ಕಿಯ ಘಟ ಜೊತೆಗೆ ಆರ್‌ಪಿಎಫ್‌, ಜಿಆರ್‌ಪಿ ಮತ್ತು ಬಹು ಪೊಲೀಸ್‌‍ ಠಾಣೆಗಳ ನಾಗರಿಕ ಪೊಲೀಸ್‌‍ ತಂಡಗಳು ರೈಲನ್ನು ಸಂಪೂರ್ಣವಾಗಿ ಶೋಧ ನಡೆಸಿದವು.

ಹಲವಾರು ಬೋಗಿಗಳ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಉಳಿದ ಬೋಗಿಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಸಂಪೂರ್ಣ ಸುರಕ್ಷಿತವೆಂದು ಘೋಷಿಸುವವರೆಗೆ ರೈಲು ಹೊರಡಲು ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಂಸ್ಥೆಗಳು ತಮ ತನಿಖೆಯನ್ನು ಮುಂದುವರಿಸುತ್ತಿರುವುದರಿಂದ ಪರಿಸ್ಥಿತಿ ಮೇಲ್ವಿಚಾರಣೆಯಲ್ಲಿದೆ.

RELATED ARTICLES

Latest News