Homeರಾಷ್ಟ್ರೀಯಚಿನ್ನ-ಬೆಳ್ಳಿ ದರಗಳಲ್ಲಿ ಭಾರೀ ಕುಸಿತ, ಬೆಳ್ಳಿ ಕೆ.ಜಿ.ಗೆ 50 ಸಾವಿರ ಇಳಿಕೆ

ಚಿನ್ನ-ಬೆಳ್ಳಿ ದರಗಳಲ್ಲಿ ಭಾರೀ ಕುಸಿತ, ಬೆಳ್ಳಿ ಕೆ.ಜಿ.ಗೆ 50 ಸಾವಿರ ಇಳಿಕೆ

Gold and silver prices fall sharply, silver drops by Rs 50,000 per kg

ಬೆಂಗಳೂರು, ಫೆ.2- ನಾಗಾಲೋಟದಲ್ಲಿ ಏರುಗತಿಯಲ್ಲಿದ್ದ ಚಿನ್ನ-ಬೆಳ್ಳಿ ದರಗಳು ಭಾರೀ ಕುಸಿತ ಕಂಡಿವೆ. ಕಳೆದ ನಾಲ್ಕು ದಿನಗಳಲ್ಲಿ ಬೆಳ್ಳಿ ಪ್ರತಿ ಕೆ.ಜಿಗೆ 1.10 ಲಕ್ಷ ರೂ. ಕಡಿಮೆಯಾಗಿದ್ದರೆ, 24 ಕ್ಯಾರೆಟ್‌ನ 1 ಗ್ರಾಂ ಚಿನ್ನ 2,732 ರೂ. ಇಳಿಕೆಯಾಗಿದೆ.

ಇಂದು ಬೆಳ್ಳಿ ಪ್ರತಿ ಕೆ.ಜಿಗೆ 50 ಸಾವಿರ ರೂ. ಕಡಿಮೆಯಾಗಿದ್ದರೆ 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂಗೆ 905 ರೂ. 22 ಕ್ಯಾರೆಟ್‌ನ ಚಿನ್ನ 830 ರೂ. ಹಾಗೂ 18 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 679 ರೂ. ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಪ್ರಸ್ತುತ 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಂಗೆ 15,153 ರೂ., 22 ಕ್ಯಾರೆಟ್‌ನ ಚಿನ್ನ 13,890 ರೂ. ಹಾಗೂ 18 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 11,365 ರೂ.ನಷ್ಟಿದೆ. ಬೆಳ್ಳಿ ಪ್ರತಿ ಗ್ರಾಂಗೆ 50 ರೂ. ಕಡಿಮೆಯಾಗಿದ್ದು, ಇಂದಿನ ದರ 300 ರೂ. ಇದೆ. ಅದೇ ರೀತಿ ಪ್ರತಿ ಕೆಜಿ ಬೆಳ್ಳಿ 50 ಸಾವಿರ ರೂ. ಕಡಿಮೆಯಾಗಿದ್ದು, 3 ಲಕ್ಷ ರೂ.ನಷ್ಟಿದೆ.

ಜ.29ರಂದು 24 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 1,177 ರೂ. ನಷ್ಟು ಏರಿಕೆಯಾಗಿ ಗರಿಷ್ಠ ದರ ದಾಖಲಾಗಿತ್ತು. ಇದರಿಂದ ಜನರು ಸೋಜಿಗ ಪಡುವಂತಾಗಿತ್ತು. ಚಿನ್ನದಂತೆ ಬೆಳ್ಳಿಯು ಏರಿಕೆಯಾಗಿ ಜ.29ರಂದು 4,10,000 ರೂ.ಗೆ ತಲುಪಿತ್ತು. ಜ.30ರಿಂದ ಚಿನ್ನ-ಬೆಳ್ಳಿ ದರಗಳು ಇಳಿಕೆಯಾಗುತ್ತಿದ್ದು, ಜನರು ಸಮಾಧಾನಪಡುವಂತಾಗಿದೆ.

RELATED ARTICLES

Latest News