Thursday, April 16, 2026
Homeರಾಜ್ಯಸಿ.ಜೆ. ರಾಯ್‌ ಸಾವಿನ ಸುತ್ತ ಹರಿದಾಡುತ್ತಿವೆ ಹಲವು ಊಹಾಪೋಹಗಳು

ಸಿ.ಜೆ. ರಾಯ್‌ ಸಾವಿನ ಸುತ್ತ ಹರಿದಾಡುತ್ತಿವೆ ಹಲವು ಊಹಾಪೋಹಗಳು

C.J. Roy's death is a subject of many speculations

ಬೆಂಗಳೂರು,ಫೆ.2-ಕಾನ್ಫಿಡೆಂಟ್‌ ಗ್ರೂಪ್‌ ತೆರೆದು ಯುವ ಸಮುದಾಯಕ್ಕೆ ಕಾನ್ಫಿಡೆಂಟ್‌ ತುಂಬಿದ್ದ ಸಂಸ್ಥಾಪಕ ಸಿ.ಜೆ. ರಾಯ್‌ ಅವರು ತಮ ಕಾನ್ಫಿಡೆಂಟ್‌ ಕಳೆದುಕೊಂಡು ಪ್ರಾಣವನ್ನೇ ಅಂತ್ಯಗೊಳಿಸಿಕೊಂಡ ಕಾರಣದ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ.
ಈ ನಡುವೆ ಅವರ ಸಾವಿಗೆ ಬೇರೊಂದು ಕಾರಣವಿತ್ತು ಎಂಬುವುದು ಕಂಡು ಬಂದಿದೆ. ರಾಯ್‌ ಅವರು ಕಳೆದ ಕೆಲವು ತಿಂಗಳಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ.

ರಾಯ್‌ಅವರು ಒತ್ತಡ ಹಾಗೂ ಖಿನ್ನತೆ ನಿವಾರಣೆಗಾಗಿ ನಗರದ ಖ್ಯಾತ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುವುದು ಗೊತ್ತಾಗಿದೆ.ಆತಹತ್ಯೆ ಹಿಂದಿನ ದಿನವಷ್ಟೇ ನಗರದ ಜಯನಗರ 8ನೇ ಬ್ಲಾಕ್‌ನಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್‌ ಪಡೆದಿದ್ದರು ಎಂಬ ಮಾಹಿತಿ ಗೊತ್ತಾಗಿದೆ.

ಒಂದು ವೇಳೆ ರಾಯ್‌ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೇ ಎನ್ನುವುದಾದರೇ ಅದಕ್ಕೆ ಕಾರಣ ಯಾವುದು. ಒಂದು ಕಡೆ ಐಟಿ ತನಿಖೆ ವೇಳೆಯೇ ಗುಂಡು ಹಾರಿಸಿಕೊಂಡಿರುವುದು ಏಕೆ ಎಂಬುವುದು ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಸುಳಿದಾಡುತ್ತಿವೆ. ಉದ್ಯಮಿಯ ಈ ಆತುರದ ನಿರ್ಧಾರಕ್ಕೆ ಅವರ ಮಾನಸಿಕ ಸ್ಥಿತಿ ಏನಾದರೂ ಕಾರಣವೇ ಎಂಬ ಪ್ರಶ್ನೆ ಉದ್ಯಮ ವಲಯದಲ್ಲಿ ಮೂಡಿದೆ.

ರಾಯ್‌ ಅವರು ತಮ ಕಚೇರಿಯಲ್ಲೇ ಎದೆಗೆ ಗುಂಡು ಹಾರಿಸಿಕೊಂಡು ಕೇವಲ 15 ನಿಮಿಷದಲ್ಲೇ ಆತಹತ್ಯೆ ಮಾಡಿಕೊಳ್ಳುವ ಆಲೋಚನೆ ಯಾಕೆ ಬಂತು ಎನ್ನುವ ಪ್ರಶ್ನೆ ಅವರ ಕುಟುಂಬಕ್ಕೆ ಮಾತ್ರವಲ್ಲದೇ ಎಲ್ಲರನ್ನೂ ಕಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅವರು ಜೀವನ ಮತ್ತು ಸಾವಿನ ಕುರಿತು ಪದೇಪದೇ ಚರ್ಚಿಸುತ್ತಿದ್ದರಲ್ಲದೆ, ಸಾವಿನ ವಿಷಯದ ಮೇಲೆ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದರೆಂದೂ ಹೇಳಲಾಗುತ್ತಿದೆ.

ಹೊರಗಿನಿಂದ ಆರೋಗ್ಯವಾಗಿ ಕಾಣಿಸಿಕೊಂಡರೂ ಒಳಗೊಳಗೆ ರಾಯ್‌‍ ಅವರು ತೀವ್ರ ಒತ್ತಡಕ್ಕೆ ಒಳಗಾಗಿ ಈ ದಿಢೀರ್‌ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಒಂದು ವೇಳೆ ರಾಯ್‌ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುವುದಾದರೇ ಅದಕ್ಕೆ ಮೂಲ ಕಾರಣವೇನು ಸಿರಿವಂತರೂ, ದೈರ್ಯವಂತರೂ ಹಾಗೂ ಸ್ಪೂರ್ತಿದಾಯಕರಾಗಿದ್ದ ಅವರ ಆತಹತ್ಯೆ ಮಾತ್ರ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಒಟ್ಟಾರೆ ರಾಯ್‌ ಅವರ ಆತಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಉದ್ಯಮಿಯ ಸಾವು ರಾಜ್ಯದೆಲ್ಲೆಡೆ ತೀವ್ರ ಚರ್ಚೆಗೆ ಗುರಿಯಾಗಿದೆ. ಈ ನಡುವೆ ಎಸ್‌‍ಐಟಿ ಮೂರು ವಿವಿಧ ದೃಷ್ಠಿಕೋನಗಳಲ್ಲಿ ತನಿಖೆ ನಡೆಸುತ್ತಿದೆ. ಪ್ರಮುಖವಾಗಿ ಐಟಿ ದಾಳಿಯಿಂದ ಒತ್ತಡಕ್ಕೆ ಒಳಗಾದರೇ, ಇಲ್ಲವೇ ವ್ಯವಹಾರವೇ ಅಥವಾ ವೈಯಕ್ತಿಕ ಜೀವನದಲ್ಲಿ ಒತ್ತಡವಿತ್ತೇ ಎಂಬುವುದರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದೆ.

RELATED ARTICLES

Latest News