Homeಜಿಲ್ಲಾ ಸುದ್ದಿಗಳುಬಾಗಲಕೋಟೆ : ಮೂವರು ಮಕ್ಕಳನ್ನು ಕೊಂದು ಆತಹತ್ಯೆಗೆ ಯತ್ನಿಸಿದ ತಾಯಿ

ಬಾಗಲಕೋಟೆ : ಮೂವರು ಮಕ್ಕಳನ್ನು ಕೊಂದು ಆತಹತ್ಯೆಗೆ ಯತ್ನಿಸಿದ ತಾಯಿ

Woman attempts suicide after killing her three children in Karnataka

ಬಾಗಲಕೋಟೆ, ಫೆ.2-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳನ್ನು ನೇಣು ಬಿಗಿದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹಿರೇಮುಚ್ಚಲ್ಗುಡ್ಡ ಗ್ರಾಮದಲ್ಲಿಘಟನೆ ನಡೆದಿದೆ.

ಮೃತರನ್ನು ಸಮೃದ್ಧಿ ಗೌಡರ್‌ (5), ಪ್ರೀತಮ್‌ ಗೌಡರ್‌ (4) ಮತ್ತು ಸುಕ್ಷೀತ್‌ ಗೌಡರ್‌ (2) ಎಂದು ಗುರುತಿಸಲಾಗಿದೆ.ಮಕ್ಕಳ ಕೊಂದು ಆತಹತ್ಯೆಗೆ ಯತ್ನಿಸಿ ರೂಪಾ ಹನುಮಂತ್‌ ಗೌಡರ್‌(25) ಬದುಕುಳಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ತೆ ಮತ್ತು ಗಂಡನೊಂದಿಗಿನ ನಡೆಯುತ್ತಿದ್ದ ನಿರಂತರ ಜಗಳದಿಂದಾಗಿ ಈ ದುಡುಕಿನ ನಿರ್ಧಾರ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಪ್ಪ-ಅಮನ ಜಗಳದಲ್ಲಿ ಪಟ್ಟ ಮಕ್ಕಳು ಬಲಿಯಾಗಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬದಾಮಿ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

RELATED ARTICLES
spot_img

Latest News