Thursday, April 16, 2026
Homeರಾಷ್ಟ್ರೀಯಏ.1ರಿಂದ ನೂತನ ಆದಾಯ ತೆರಿಗೆ ಕಾಯ್ದೆ ಜಾರಿ : ನಿರ್ಮಲಾ ಸೀತಾರಾಮ್‌

ಏ.1ರಿಂದ ನೂತನ ಆದಾಯ ತೆರಿಗೆ ಕಾಯ್ದೆ ಜಾರಿ : ನಿರ್ಮಲಾ ಸೀತಾರಾಮ್‌

Income tax law comes into force from April 1: FM Nirmala Sitharaman

ನವದೆಹಲಿ,ಫೆ.1- ಆದಾಯ ತೆರಿಗೆ ಕಾಯ್ದೆಯನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸಿದ್ದು, ಪ್ರಸ್ತಾವಿತ ನೂತನ ಕಾಯ್ದೆ ಇದೇ ವರ್ಷದ ಏ.1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿಂದು ಬಜೆಟ್‌ ಮಂಡಿಸಿರುವ ಅವರು, 1961ರ ಆದಾಯ ತೆರಿಗೆ ಕಾಯ್ದೆಯನ್ನು ದಾಖಲಾರ್ಹ ಸಮಯದ ಒಳಗೆ ಪರಿಶೀಲನೆಗೆ ಒಳಪಡಿಸಲಾಗಿದೆ. ಅದರ ಅನುಸಾರ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಶೀಘ್ರವೇ ಅಧಿಸೂಚಿಸಲಾಗುವುದು.
ತೆರಿಗೆ ಪಾವತಿದಾರರಿಗೆ ತಮ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುವುದು ಹೊಸ ಕಾಯ್ದೆಯ ಮೂಲ ಅಂಶ ಎಂದಿದ್ದಾರೆ.

ಸಾಮಾನ್ಯ ನಾಗರಿಕರು ಯಾವುದೇ ತೊಡಕುಗಳಿಲ್ಲದೆ ಭರ್ತಿ ಮಾಡುಬಹುದಾದಂತಹ ನಮೂನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೊಸ ಕಾಯ್ದೆಯಲ್ಲಿ ಮೋಟಾರು ಅಪಘಾತ ಪರಿಹಾರ ಸಂದರ್ಭದಲ್ಲಿ ನ್ಯಾಯಮಂಡಳಿ ಆದೇಶಿಸುವ ಮೊತ್ತಕ್ಕೆ ಅದಾಯ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.

ವಿದೇಶಿ ಪ್ರವಾಸ ಸಂದರ್ಭದಲ್ಲಿ ತೆರಿಗೆ ಸಲಹೆ ಸೇವೆ(ಟಿಸಿಎಸ್‌‍)ಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಶೇ.5 ಮತ್ತು 20ರಿಂದ ಯಾವುದೇ ನಿಬಂಧನೆ ಇಲ್ಲದೆ ಶೇ.2ಕ್ಕೆ ತಗ್ಗಿಸಲಾಗುತ್ತಿದೆ. ಅದೇ ರೀತಿ ಶಿಕ್ಷಣ ಹಾಗೂ ವೈದ್ಯಕೀಯ ಉದ್ದೇಶಗಳ ಟಿಸಿಎಸ್‌‍ ದರವನ್ನು ಶೇ.5ರಿಂದ 2ಕ್ಕೆ, ಮಾನವ ಸಂಪನೂಲ ಸರಬರಾಜು ಮಾಡುವವರಿಗೆ ಟಿಡಿಎಸ್‌‍ ಕಡಿತದ ಪ್ರಮಾಣವನ್ನು ಶೇ.1 ಅಥವಾ 2ಕ್ಕೆ ಮಿತಿಗೊಳಿಸಲಾಗುತ್ತಿದೆ.

ಸಣ್ಣ ತೆರಿಗೆ ಪಾವತಿದಾರರಿಗೆ ಕಡಿಮೆ ಅಥವಾ ಯಾವುದೇ ಕಡಿತ ಇಲ್ಲದಂತಹ ಪ್ರಮಾಣ ಪತ್ರ ಸೇವೆಯ ಪ್ರಸ್ತಾವನೆಯನ್ನು ಕಲ್ಪಿಸಲಾಗಿದೆ. ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಲಾಗಿದ್ದು, ಡಿ.31ರಿಂದ ಮಾ.31ರ ನಡುವೆ ಸಣ್ಣ ಪ್ರಮಾಣದ ಶುಲ್ಕದೊಂದಿಗೆ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.

ಐಟಿಆರ್‌ 1 ಮತ್ತು ಐಟಿಆರ್‌2ರ ಪಾವತಿಗೆ ವ್ಯಕ್ತಿಗತ ಸಂಸ್ಥೆಗಳಿಗೆ ಜುಲೈ 31ರ ಬದಲಾಗಿ ಆ.31ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ಲೆಕ್ಕ ಪರಿಶೋಧನೆ ವಿನಾಯ್ತಿ ಪಡೆದ ವ್ಯಾಪಾರಗಳು ಹಾಗೂ ಟ್ರಸ್ಟ್‌ಗಳಿಗೂ ಈ ಸೌಲಭ್ಯ ಪಡೆಯಬಹುದಾಗಿದೆ.
ಭಾರತದಲ್ಲಿ ವಾಸ ಇಲ್ಲದಿದ್ದವರು ಸ್ಥಿರಾಸ್ತಿಗಳನ್ನು ಮಾರಾಟ ಮಾಡುವ ವೇಳೆಯಲ್ಲಿ ಟಿಡಿಎಸ್‌‍ ಬದಲಾಗಿ ಸಾಂಸ್ಥಿಕ ಠೇವಣಿಗಳಾಗಿ ಖರೀದಾರರ ಪಾನ್‌ ಸಂಖ್ಯೆ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಸಣ್ಣ ಪ್ರಮಾಣದ ತೆರಿಗೆದಾರರಾಗಿರುವ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಮಾಹಿತಿ ತಂತ್ರಜ್ಞಾನದ ಉದ್ಯೋಗಿಗಳು, ಸ್ಥಳಾಂತರಗೊಂಡ ಅನಿವಾಸಿ ಭಾರತೀಯರು ಸೇರಿದಂತೆ ಇತರರಿಗಾಗಿ ಏಕ ಅವಧಿಯ ವಿದೇಶಿ ಆಸ್ತಿ ಘೋಷಣೆಯಾಗಿ 6 ತಿಂಗಳ ಕಾಲವಕಾಶ ನೀಡುವ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

ನಿರ್ಧಿಷ್ಟ ಮಾನದಂಡದ ಆದಾಯ ಅಥವಾ ಆಸ್ತಿಯನ್ನು ಇದರಡಿ ಅಧಿಕೃತಗೊಳಿಸಿಕೊಳ್ಳಬಹುದು. ಈವರೆಗೂ ಯಾರು ವಿದೇಶದಲ್ಲಿರುವ ಆಸ್ತಿ ಹಾಗೂ ಆದಾಯವನ್ನು ಘೋಷಣೆ ಮಾಡಿಕೊಳ್ಳದಿದ್ದರೆ ಹಾಗೂ ವಿದೇಶದಲ್ಲಿರುವ ಆಸ್ತಿ ಇತರೆ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದವರಿಗೆ ಇದು ನೆರವಾಗಲಿದೆ ಎಂದು ತಿಳಿಸಲಾಗಿದೆ.

ಆದರೆ ಅಘೋಷಿತ ಆಸ್ತಿ ಆದಾಯದ ಮಿತಿಯನ್ನು 1 ಕೋಟಿ ರೂ.ಗೆ ಮಿತಿಗೊಳಿಸಲಾಗಿದೆ. ಶೇ.30ರಷ್ಟು ಮಾರುಕಟ್ಟೆ ಮೌಲ್ಯವನ್ನು ಪಾಲಿಸಬೇಕಿದೆ ಎಂದು ವಿವರಿಸಿದ್ದಾರೆ.
ಗುಂಪು 2ರಲ್ಲಿ 5 ಕೋಟಿವರೆಗೂ ಆದಾಯ ಮತ್ತು ಆಸ್ತಿ ಘೋಷಣೆಗೆ ಅವಕಾಶವಿದೆ. ಅಲ್ಲಿ ದಂಡ ಮತ್ತು ಒಂದು ಲಕ್ಷ ರೂ.ವರೆಗಿನ ಶುಲ್ಕವನ್ನು ಪಾವತಿಸಬೇಕಿದೆ ಎಂದು ಹೇಳಿದ್ದಾರೆ.

RELATED ARTICLES

Latest News