Homeರಾಷ್ಟ್ರೀಯಕುಶಾ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

ಕುಶಾ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

India successfully tests long-range 'Kusha' air defence missile system

ಬಾಲಾಸೋರ್‌,ಜು.24- ಭಾರತೀಯ ವಾಯು ಪ್ರದೇಶದ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ದೇಶದ ಆಯಕಟ್ಟಿನ ಪ್ರದೇಶಗಳಿಗೆ ಭೇದ್ಯ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಪ್ರದಾನಿ ನರೇಂದ್ರಮೋದಿ ಅವರ ಆಶಯದ ಮಿಷನ್‌ ಸುದರ್ಶನ ಚಕ್ರ ಮಹತ್ವದ ಮೈಲಿಗಲ್ಲು ತಲುಪಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಒಡಿಶಾ ಕರಾವಳಿಯ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ದ್ವೀಪದಿಂದ ದೀರ್ಘ ವ್ಯಾಪ್ತಿಯ ಕುಶಾ ಕ್ಷಿಪಣಿ ವ್ಯವಸ್ಥೆಯ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಮುಂಬರುವ 12 ತಿಂಗಳುಗಳಲ್ಲಿ 120 ಕಿ.ಮೀ ನಿಂದ 400 ಕಿ.ಮೀ ವ್ಯಾಪ್ತಿಯ ಮೂರು ವಿವಿಧ ಮಾದರಿಯ ಇಂಟರ್‌ಸೆಪ್ಟರ್‌ಗಳನ್ನು ಪರೀಕ್ಷಿಸಲು ಭಾರತ ಸಜ್ಜಾಗಿದೆ.

ಪ್ರಾಜೆಕ್ಟ್‌ ಕುಶಾ: ಮೂರು ಹಂತದ ವಾಯು ರಕ್ಷಣಾ ಕವಚಱಪ್ರಾಜೆಕ್ಟ್‌ ಕುಶಾೞ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಾಯು ರಕ್ಷಣಾ ವ್ಯವಸ್ಥೆಯು ಶತ್ರುಗಳ ಯುದ್ಧ ವಿಮಾನಗಳು, ಬ್ಯಾಲಿಸ್ಟಿಕ್‌ ಹಾಗೂ ಕ್ರೂಸ್‌‍ ಕ್ಷಿಪಣಿಗಳು, ಕಾಮಿಕೇಜ್‌ (ಸ್ವಯಂಘಾತಿ) ಡ್ರೋನ್‌ಗಳು ಮತ್ತು ದೀರ್ಘ ವ್ಯಾಪ್ತಿಯ ಬಾಂಬರ್‌ಗಳನ್ನು ತಡೆದು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
ಎಂ-1 ಇಂಟರ್‌ಸೆಪ್ಟರ್‌- 120 ರಿಂದ 150 ಕಿ.ಮೀ ವ್ಯಾಪ್ತಿಯ ಗುರಿಗಳನ್ನು ತಡೆಹಿಡಿಯುವ ಮೊದಲ ಹಂತದ ಕ್ಷಿಪಣಿ.

ಎಂ-2 ಇಂಟರ್‌ಸೆಪ್ಟರ್‌- 250 ಕಿ.ಮೀ ವ್ಯಾಪ್ತಿಯವರೆಗಿನ ಬೆದರಿಕೆಗಳನ್ನು ನಿಗ್ರಹಿಸುವ ಸಾಮರ್ಥ್ಯವಿದೆ. ಎಂ-3 ಇಂಟರ್‌ಸೆಪ್ಟರ್‌- 350ರಿಂದ 400 ಕಿ.ಮೀ ವ್ಯಾಪ್ತಿಯವರೆಗಿನ ಸುಧಾರಿತ ಮತ್ತು ಸುದೀರ್ಘ ವ್ಯಾಪ್ತಿಯ ಶತ್ರು ಬೆದರಿಕೆಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.

ಇದು ಭಾರತದ ಪ್ರಸ್ತುತ 80 ಕಿ.ಮೀ ವ್ಯಾಪ್ತಿಯ ಮಧ್ಯಮ ಶ್ರೇಣಿಯ ಕ್ಷಿಪಣಿ (ಎಂಆರ್‌-ಎಸ್‌‍ಎಎಂ) ಮತ್ತು ರಷ್ಯಾದ ಎಸ್‌‍-400 ವ್ಯವಸ್ಥೆಯ ನಡುವಿನ ಅಂತರವನ್ನು ಕಡಿಮೆ ಮಾಡಲಿದ್ದು, ದೇಶದ ವಾಯು ರಕ್ಷಣೆಯ ಬೆನ್ನೆಲುಬಾಗಲಿದೆ. ಮೇ 2022ರಲ್ಲೇ ಭದ್ರತಾ ಸಚಿವ ಸಂಪುಟ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡಿದ್ದರೂ, ಇತ್ತೀಚಿನ ಭೌಗೋಳಿಕ-ರಾಜಕೀಯ ವಿದ್ಯಮಾನಗಳು ಮತ್ತು ಯುದ್ಧತಂತ್ರದ ಬದಲಾವಣೆಗಳು ಇದಕ್ಕೆ ಹೆಚ್ಚಿನ ವೇಗ ನೀಡಿವೆ.

ಆಪರೇಷನ್‌ ಸಿಂಧೂರ್‌ೞ ಸಮಯದಲ್ಲಿ ಪಾಕಿಸ್ತಾನವು ನೂರಾರು ಪೊಜೆಕ್ಟೈಲ್‌್ಸ ಹಾಗೂ ಡ್ರೋನ್‌ಗಳ ಮೂಲಕ ದಾಳಿಗೆ ಯತ್ನಿಸಿದಾಗ, ಭಾರತೀಯ ಆಕಾಶ್‌ ತೀರ್‌ ವ್ಯವಸ್ಥೆಯು ಅತ್ಯಂತ ಯಶಸ್ವಿಯಾಗಿ ಅವುಗಳನ್ನು ತಡೆದು ತಟಸ್ಥಗೊಳಿಸಿತು.

ಇದಲ್ಲದೆ ಮಧ್ಯಪ್ರಾಚ್ಯದಲ್ಲಿ ಇರಾನ್‌ ನಡೆಸಿದ ದೀರ್ಘ ವ್ಯಾಪ್ತಿಯ ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳು, ಮುಂಬರುವ ದಿನಗಳಲ್ಲಿ ಸ್ಟ್ಯಾಂಡ್‌ಆಫ್‌ (ದೂರದಿಂದಲೇ ದಾಳಿ ಮಾಡುವ) ಶಸಾ್ತ್ರಸ್ತ್ರಗಳೇ ನಿರ್ಣಾಯಕವಾಗಲಿವೆ ಎಂಬುದನ್ನು ಸಾಬೀತುಪಡಿಸಿವೆ. ಈ ಹಿನ್ನೆಲೆಯಲ್ಲಿ ಭಾರತವು ಶತ್ರು ಕ್ಷಿಪಣಿ ಉಡಾವಣೆಯಾದ ಕ್ಷಣದಲ್ಲೇ ಗಡಿಯಾಚೆಯಿಂದಲೇ ಅವುಗಳನ್ನು ಪತ್ತೆಹಚ್ಚುವ ಸುಧಾರಿತ ರಾಡಾರ್‌ಗಳು ಮತ್ತು ಎಲ್‌ಆರ್‌-ಎಸ್‌‍ಎಎಂ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಪ್ರಥಮ ಆದ್ಯತೆ ನೀಡಿದೆ.

ಎಸ್‌‍-00 ವ್ಯವಸ್ಥೆ ಮತ್ತು ಸ್ವದೇಶಿ ಸಾಮರ್ಥ್ಯದ ಸಂಯೋಜನೆ ಸ್ವದೇಶಿ ೞಕುಶಾೞ ಯೋಜನೆಯ ಅಭಿವೃದ್ಧಿಯ ಜೊತೆಗೆ, ಭಾರತ ತನ್ನ ಕ್ಷಿಪಣಿ ರಕ್ಷಣಾ ಕವಚವನ್ನು ಬಲಪಡಿಸಲು ರಷ್ಯಾದಿಂದ ಎಸ್‌‍-400ವಾಯು ರಕ್ಷಣಾ ವ್ಯವಸ್ಥೆಯ ಪೂರೈಕೆಯನ್ನೂ ಮುಂದುವರಿಸಿದೆ. ರಷ್ಯಾದಿಂದ ಐದನೇ ಎಸ್‌‍-400 ವ್ಯವಸ್ಥೆಯು ಶೀಘ್ರದಲ್ಲೇ ಭಾರತ ತಲುಪುವ ನಿರೀಕ್ಷೆಯಿದೆ.

ಹೆಚ್ಚುವರಿ ಖರೀದಿ:

ಬೈ ಅಂಡ್‌ ಮೇಕ್‌ ಮಾದರಿಯಡಿ ಮತ್ತಷ್ಟು -400 ವ್ಯವಸ್ಥೆಗಳು ಹಾಗೂ 280ಕ್ಕೂ ಹೆಚ್ಚು ಎಸ್‌‍-400 ಕ್ಷಿಪಣಿಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ನಿಯಂತ್ರಕ ಅನುಮೋದನೆಗಳು ಲಭ್ಯವಾಗುತ್ತಿವೆ. ಇತ್ತೀಚಿನ ಭದ್ರತಾ ಸವಾಲುಗಳ ನಡುವೆ, ಗಡಿಯುದ್ದಕ್ಕೂ ನಿರಂತರ ಜಾಗರೂಕತೆ ವಹಿಸಿರುವ ಭಾರತೀಯ ಸಶಸ್ತ್ರ ಪಡೆಗಳು ೞಆತನಿರ್ಭರ ಭಾರತೞ ದೃಷ್ಟಿಕೋನದೊಂದಿಗೆ ತನ್ನ ವಾಯು ಗಡಿಯನ್ನು ಅಜೇಯ ಗೋಡೆಯನ್ನಾಗಿ ಪರಿವರ್ತಿಸುತ್ತಿವೆ.

RELATED ARTICLES

Latest News