ನವದೆಹಲಿ,ಅ.25- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ವೋಕಲ್ ಫಾರ್ ಲೋಕಲ್ ಅಭಿಯಾನವನ್ನು ಮತ್ತಷ್ಟು ಬಲಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಕರೆ ನೀಡಿದ್ದಾರೆ. ಭಾನುವಾರ ತಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, ಭಾರತೀಯ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಧಿಸುತ್ತಿರುವ ಪ್ರಗತಿ, ಸಾಂಪ್ರದಾಯಿಕ ಕಷಿ ಪದ್ಧತಿಗಳ ಪುನರುಜ್ಜೀವನ ಹಾಗೂ ಜಲಮೂಲಗಳ ಸಂರಕ್ಷಣೆಗೆ ಜನರು ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ಬಿಹಾರದ ಮಖಾನಾ ಹಾಗೂ ಕರ್ನಾಟಕದ ತೊಗರಿ ಬೇಳೆ ಸೇರಿದಂತೆ ದೇಶದ ವಿವಿಧ ಭಾಗಗಳ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಿವೆ ಎಂದು ಮೋದಿ ಹೇಳಿದರು. ಮಹಾರಾಷ್ಟ್ರದ ಬುಡಕಟ್ಟು ಸಮುದಾಯಗಳು ತಯಾರಿಸುವ ಉತ್ಪನ್ನಗಳು ತಮ ವಿಶಿಷ್ಟ ಕಲೆ ಮತ್ತು ಆಕರ್ಷಕ ಪ್ಯಾಕೇಜಿಂಗ್ನಿಂದ ಗಮನ ಸೆಳೆಯುತ್ತಿವೆ ಎಂದು ತಿಳಿಸಿದರು.
ಖಾದಿಯ ಜನಪ್ರಿಯತೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದ್ದು, ಅದರ ಖರೀದಿಯು ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವತ್ತಿಗಳನ್ನು ಉಳಿಸಿಕೊಂಡು ಬಂದಿರುವ ಕುಶಲಕರ್ಮಿಗಳಿಗೆ ಬೆಂಬಲ ನೀಡುತ್ತದೆ. ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ದೇಶದ ಆರ್ಥಿಕತೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಪಂಜಾಬ್ನಲ್ಲಿ ಸಾಂಪ್ರದಾಯಿಕ ಕಷಿ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಖೇತಿ ವಿರಾಸತ್ ಮಿಷನ್ ಸಂಸ್ಥೆಯು ಮಾಲ್ವಾ ಪ್ರದೇಶದಲ್ಲಿ ನೈಸರ್ಗಿಕ ಹತ್ತಿ ಕಷಿಯನ್ನು ಉತ್ತೇಜಿಸಲು ನವ್-ತ್ರಿಂಜನ್ ಎಂಬ ಉಪಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ರಾಸಾಯನಿಕಗಳನ್ನು ಬಳಸದೆ ಸಾವಯವ ಹತ್ತಿ ಬೆಳೆಯಲಾಗುತ್ತಿದೆ. ನೈಸರ್ಗಿಕ ಬಣ್ಣ ಹೊಂದಿರುವ ಹತ್ತಿಯನ್ನೂ ಉತ್ಪಾದಿಸಲಾಗುತ್ತಿದ್ದು, ಅದರಿಂದ ತಯಾರಿಸಿದ ನೂಲು ಮತ್ತು ಬಟ್ಟೆಗಳಿಗೆ ಬಣ್ಣ ನೀಡಲು ಹೆಚ್ಚುವರಿ ರಾಸಾಯನಿಕಗಳ ಅವಶ್ಯಕತೆ ಕಡಿಮೆಯಾಗುತ್ತದೆ ಎಂದು ಮೋದಿ ವಿವರಿಸಿದರು.
ಹೆವಾಲ್ ನದಿಗೆ ಮರುಜೀವ:
ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಜನರು ಹೆವಾಲ್ ನದಿಯನ್ನು ಪುನರುಜ್ಜೀವನಗೊಳಿಸಲು ನಡೆಸಿದ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
ಕೆಲವು ವರ್ಷಗಳ ಹಿಂದೆ ನದಿಯ ನೀರಿನ ಪ್ರಮಾಣ ಕಡಿಮೆಯಾಗುವುದರೊಂದಿಗೆ ಸುತ್ತಮುತ್ತಲಿನ ನೈಸರ್ಗಿಕ ಜಲಮೂಲಗಳೂ ಬತ್ತಿಹೋಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಮತ್ತು ಗ್ರಾಮಸ್ಥರು ಒಗ್ಗೂಡಿ ನದಿ ಸಂರಕ್ಷಣಾ ಅಭಿಯಾನ ಆರಂಭಿಸಿದ್ದರು.
ಮಳೆನೀರು ಸಂಗ್ರಹ, ನೀರು ಭೂಮಿಯೊಳಗೆ ಇಂಗುವಂತೆ ಮಾಡುವ ಕ್ರಮಗಳು ಹಾಗೂ ಸಸಿಗಳ ನೆಡುವಿಕೆಗೆ ಆದ್ಯತೆ ನೀಡಲಾಯಿತು. ಈ ಪ್ರಯತ್ನಗಳಿಂದ ಹೆವಾಲ್ ನದಿಗೆ ಮರುಜೀವ ದೊರೆತಿದ್ದು, ಸುತ್ತಮುತ್ತಲಿನ ಅನೇಕ ನೈಸರ್ಗಿಕ ಜಲಮೂಲಗಳ ಪುನರುಜ್ಜೀವನಕ್ಕೂ ನೆರವಾಗಿದೆ ಎಂದು ಮೋದಿ ಹೇಳಿದರು.
ಮನ್ ಕಿ ಬಾತ್ ಕಾರ್ಯಕ್ರಮವು ದೇಶದ ವಿವಿಧ ಭಾಗಗಳಲ್ಲಿ ಜನರು ಕೈಗೊಳ್ಳುತ್ತಿರುವ ಉತ್ತಮ ಕಾರ್ಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಮತ್ತು ಅವರ ಕೊಡುಗೆಗಳಿಗೆ ಗೌರವ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಸ್ಥಳೀಯ ಉತ್ಪನ್ನಗಳ ಬಳಕೆ, ಸುಸ್ಥಿರ ಕಷಿ ಮತ್ತು ಪರಿಸರ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿದ ಅವರು, ದೇಶದ ಅಭಿವದ್ಧಿಯಲ್ಲಿ ಸಾಮಾನ್ಯ ನಾಗರಿಕರ ಕೊಡುಗೆ ಮಹತ್ವದ್ದಾಗಿದೆ ಎಂಬ ಸಂದೇಶವನ್ನು ತಮ ಭಾಷಣದಲ್ಲಿ ಸಾರಿದರು.
ದೀಪಾವಳಿ, ಛಠ್ ಪೂಜೆಗೆ ಶುಭಾಶಯ:
ಭಾಷಣದ ಕೊನೆಯಲ್ಲಿ ದೀಪಾವಳಿ ಮತ್ತು ಛಠ್ ಪೂಜೆ ಸೇರಿದಂತೆ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಜನರಿಗೆ ಪ್ರಧಾನಿ ಶುಭಾಶಯ ಕೋರಿದರು. ಹಬ್ಬಗಳನ್ನು ಕುಟುಂಬದವರೊಂದಿಗೆ ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವಂತೆ ಮನವಿ ಮಾಡಿದ ಅವರು, ಸಂಭ್ರಮದಲ್ಲಿ ಇತರರನ್ನೂ ಒಳಗೊಳ್ಳುವ ಮೂಲಕ ಸಂತೋಷವನ್ನು ಹಂಚಿಕೊಳ್ಳುವಂತೆ ಕರೆ ನೀಡಿದರು.
ಸ್ಥಳೀಯ ಉತ್ಪನ್ನಗಳ ಬಳಕೆ, ಸ್ವಾವಲಂಬನೆ, ಆರೋಗ್ಯ, ಪರಿಸರ ಸ್ನೇಹಿ ಕಷಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿದ ಈ ಬಾರಿಯ ಮನ್ ಕಿ ಬಾತ್ ಭಾಷಣದಲ್ಲಿ, ದೇಶದ ಅಭಿವದ್ಧಿಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪ್ರಧಾನಿ ಪುನರುಚ್ಚರಿಸಿದರು.
