Homeರಾಷ್ಟ್ರೀಯಡಾಲರ್‌ ಎದುರು ಮತ್ತಷ್ಟು ಕುಸಿದ ರೂಪಾಯಿ ಮೌಲ್ಯ

ಡಾಲರ್‌ ಎದುರು ಮತ್ತಷ್ಟು ಕುಸಿದ ರೂಪಾಯಿ ಮೌಲ್ಯ

ಮುಂಬೈ, ಸೆ.17: ಅಮೆರಿಕದ ಫೆಡರಲ್‌ ರಿಸರ್ವ್‌ ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿದರ ಹೆಚ್ಚಿಸಿದ ಬೆನ್ನಲ್ಲೇ ರೂಪಾಯಿ ಮೌಲ್ಯ ಇಂದು ಡಾಲರ್‌ ಎದುರು 96 ರೂ. ಗಡಿ ದಾಟಿದೆ.

ಜುಲೈ ಬಳಿಕ ಇದೇ ಮೊದಲ ಬಾರಿಗೆ ರೂಪಾಯಿ ಈ ಮಟ್ಟಕ್ಕಿಂತ ಕೆಳಗೆ ವಹಿವಾಟು ನಡೆಸಿದೆ. ಹಿಂದಿನ ವಹಿವಾಟಿನಲ್ಲಿ 95.95ಕ್ಕೆ ಕೊನೆಗೊಂಡಿದ್ದ ರೂಪಾಯಿ, ಗುರುವಾರ 96.03ಕ್ಕೆ ಕುಸಿದಿತ್ತು.

ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ ಅಲ್ಪಾವಧಿಯ ಮಾನದಂಡ ಬಡ್ಡಿದರವನ್ನು 25 ಮೂಲಾಂಶ ಹೆಚ್ಚಿಸಿ ಶೇ.3.75ರಿಂದ ಶೇ.4ಕ್ಕೆ ನಿಗದಿಪಡಿಸಿದೆ. ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ವರ್ಷ ಕನಿಷ್ಠ ಮತ್ತೊಂದು ಬಡ್ಡಿದರ ಹೆಚ್ಚಳವಾಗಬಹುದು ಎಂದು ಫೆಡರಲ್‌ ರಿಸರ್ವ್‌ನ ಬಹುತೇಕ ನೀತಿನಿರೂಪಕರು ನಿರೀಕ್ಷಿಸಿದ್ದಾರೆ.

ಬಡ್ಡಿದರ ಹೆಚ್ಚಳ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಹಣಕಾಸು ನೀತಿಯ ಸೂಚನೆಯ ಪರಿಣಾಮವಾಗಿ ಡಾಲರ್‌ ಬಲಗೊಂಡಿದ್ದು, ರೂಪಾಯಿ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಮಾರುಕಟ್ಟೆ ವೀಕ್ಷಕರು ವಿಶ್ಲೇಷಿಸಿದ್ದಾರೆ.

RELATED ARTICLES

Latest News