Saturday, April 11, 2026
Homeರಾಷ್ಟ್ರೀಯಬೆಂಗಳೂರನ್ನು ಭಿಕ್ಷಾಟನೆ ಮುಕ್ತ ನಗರ ಮಾಡಲು ಕ್ರಮ : ಸಚಿವ ಮಹದೇವಪ್ಪ

ಬೆಂಗಳೂರನ್ನು ಭಿಕ್ಷಾಟನೆ ಮುಕ್ತ ನಗರ ಮಾಡಲು ಕ್ರಮ : ಸಚಿವ ಮಹದೇವಪ್ಪ

Steps to make Bengaluru a begging-free city: Minister Mahadevappa

ಬೆಂಗಳೂರು,ಮಾ.13- ಬೆಂಗಳೂರು ನಗರ ಒಳಗೊಂಡಂತೆ ಸಂಪೂರ್ಣ ರಾಜ್ಯದಲ್ಲಿ ಭಿಕ್ಷಾಟನೆ ಮುಕ್ತ ಮಾಡಲು ಕ್ರಮ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಕೆ.ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭಿಕ್ಷಾಟನೆ ಹಿಂದೆ ಮಾಫಿಯಾ ಇದ್ದರೆ ಅದನ್ನು ನಿರ್ಬಂಧಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮ ಹಾಗೂ ಪೊಲೀಸ್‌‍ ಇಲಾಖೆಯವರೊಡನೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕೇಂದ್ರ ಪರಿಹಾರ ಸಮಿತಿಯ ಅಧೀನದಲ್ಲಿ ಬೆಂಗಳೂರು ಸೇರಿದಂತೆ ಒಟ್ಟು 15 ನಿರಾಶ್ರಿತರ ಪರಿಹಾರ ಕೇಂದ್ರಗಳಿವೆ. 2025-26ನೇ ಸಾಲಿನಲ್ಲಿ 5,649 ಮಂದಿಯನ್ನು ಬಂಧಿಸಿ 5,402 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಭಿಕ್ಷುಕರ ಪುನರ್‌ ವಸತಿಗಾಗಿ 69.07 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರಕ್ಕೆ ಹೊರರಾಜ್ಯದವರು ವಿವಿಧ ಕಾರಣಗಳಿಂದಾಗಿ ಹೆಚ್ಚು ಬರುವುದರಿಂದ ಭಿಕ್ಷುಕರು ಹೆಚ್ಚಾಗಲು ಕಾರಣವಾಗಿದೆ. ಬೆಂಗಳೂರನ್ನು ಭಿಕ್ಷಾಟನೆ ಮುಕ್ತ ನಗರವನ್ನಾಗಿ ಮಾಡಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕ್ರಮ ವಹಿಸಲಾಗಿದೆ. ಭಿಕ್ಷಾಟನೆ ವೃತ್ತಿಗೆ ಮತ್ತೆ ಮರಳಬಾರದೆಂದು ವಿವಿಧ ವೃತ್ತಿ ತರಬೇತಿಯನ್ನು ಪುನರ್‌ ವಸತಿ ಕೇಂದ್ರದಲ್ಲಿ ನೀಡಲಾಗುತ್ತಿದೆ.

ಮಕ್ಕಳೊಂದಿಗೆ ಭಿಕ್ಷಾಟನೆ ಮಾಡುವುದನ್ನು ನಿರ್ಮೂಲನೆ ಮಾಡಲು ಭಿಕ್ಷಾಟನೆಯಲ್ಲಿ ಮಕ್ಕಳೊಂದಿಗೆ ತೊಡಗಿರುವ ಮಹಿಳೆಯರನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ 936 ಮಂದಿ ವಿವಿಧ ತರಬೇತಿಗಳನ್ನು ಪಡೆದಿದ್ದಾರೆ. 1,026 ಮಂದಿಯನ್ನು ಮರಳಿ ಅವರ ಕುಟುಂಬಗಳಿಗೆ ವಾಪಸ್‌‍ ಕಳುಹಿಸಲಾಗಿದೆ.

ನಿರಾಶ್ರಿತರ ಒಳಿತಿಗಾಗಿ ಮಾನಸಿಕ ಆರೋಗ್ಯ ಕೇಂದ್ರ, ಡಾ.ಬಿ.ಆರ್‌.ಅಂಬೇಡ್ಕರ್‌ ತರಬೇತಿ ಕೇಂದ್ರ ಮತ್ತು ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಲು ಕೇಂದ್ರ ಪರಿಹಾರ ಸಮಿತಿಗೆ ಸೂಚಿಸಲಾಗಿದೆ. ಅಲ್ಲದೆ ಸಾಮಾಜಿಕ ಭದ್ರತೆಗಾಗಿ ಆಧಾರ್‌ಕಾರ್ಡ್‌, ವೃದ್ಧಾಪ್ಯವೇತನ, ವಿಕಲಚೇತನ ವೇತನ, ವಿಧವಾ ವೇತನ ಒದಗಿಸಲು ಸಂಬಂಧಿತ ಇಲಾಖೆಗಳೊಂದಿಗೆ ಮಂಜೂರಾತಿಗಾಗಿ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ವೇತನ ಬಾಕಿ ಇಲ್ಲ :
ಆಧಾರ್‌ಸೀಡ್‌ ಆಗಿರುವ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಿದವರಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದ್ದು, ಯಾವುದೇ ಅರ್ಜಿಗಳು ಪಾವತಿಗೆ ಬಾಕಿ ಉಳಿದಿಲ್ಲ ಎಂದು ಶಾಸಕರಾದ ಹೇಮಲತಾ ನಾಯಕ್‌ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬ್ಯಾಂಕ್‌ ಖಾತೆಗೆ ಆಧಾರ್‌ಸೀಡ್‌ ಆಗದಿರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನೀಡಿಕೆ ವಿಳಂಬವಾಗಿದ್ದು, ಆಧಾರ್‌ಸೀಡ್‌ ಆದ ಕೂಡಲೇ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂದರು.

27 ವಿದ್ಯಾರ್ಥಿಗಳ ಆತಹತ್ಯೆ :
ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 10, ವಸತಿ ಶಾಲೆಯಲ್ಲಿ 5 ಹಾಗೂ ವಸತಿ ನಿಲಯಗಳಲ್ಲಿ 12 ವಿದ್ಯಾರ್ಥಿಗಳು ಸೇರಿ ಒಟ್ಟು 27 ವಿದ್ಯಾರ್ಥಿಗಳು ಆತಹತ್ಯೆ ಮಾಡಿಕೊಂಡಿದ್ದಾರೆ. ಎಂದು ಶಾಸಕ ತಿಪ್ಪಣ್ಣಪ್ಪ ಕಮಕನೂರು ಅವರ ಪ್ರಶ್ನೆಗೆ ಉತ್ತರಿಸಿದರು.
ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಪ್ರೇಮ ವೈಫಲ್ಯ, ವೈಯಕ್ತಿಕ, ಮಾನಸಿಕ ಖಿನ್ನತೆ, ಆನ್‌ಲೈನ್‌ ಜೂಜಾಟ ಮೊದಲಾದ ಕಾರಣಕ್ಕೆ ಆತಹತ್ಯೆ ಮಾಡಿಕೊಂಡಿದ್ದು, ಈ ರೀತಿ ಆತಹತ್ಯೆ ತಡೆಗೆ ನೀತಿ ತರುತ್ತಿದ್ದೇವೆ. ಇದಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದರು.

ಗೃಹ ಇಲಾಖೆ, ಆರೋಗ್ಯ ಇಲಾಖೆ, ತಹಸೀಲ್ದಾರ್‌ ಸೇರಿ ಹಲವರಿಂದ ವಿದ್ಯಾರ್ಥಿಗಳಿಗೆ ಆತಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆತಹತ್ಯೆ ತಡೆನೀತಿ 2025 ರಂತೆ 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಕನಿಷ್ಠ ಒಬ್ಬ ಅರ್ಹ ಮನೋವೈದ್ಯರನ್ನು, ಕೌನ್ಸಿಲ್‌ ಅಥವಾ ಸಮಾಜ ಸೇವಕರನ್ನು ನೇಮಿಸಬೇಕಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಇಲಾಖಾ ನಿಲಯಗಳಲ್ಲಿ ಪ್ರತಿವಾರ ಮಹಿಳಾ ಸಮಾಲೋಚಕಿ ಅಥವಾ ಮಹಿಳಾ ವೈದ್ಯರ ಮೂಲಕ ಸಮಾಲೋಚನೆ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.

2025-26ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 6155.74 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸಿ ನ್ಯಾಯ ಸಮತವಾಗಿ ಮಂಜೂರಾತಿ ನೀಡಲಾಗುವುದು. ಬೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪುನರ್‌ ಪರಿಶೀಲನೆ ಮಾಡಿ ಮಂಜೂರಾತಿ ನೀಡಲಾಗುವುದು ಎಂದು ಜೆಡಿಎಸ್‌‍ ಶಾಸಕ ಟಿ.ಎನ್‌.ಜವರಾಯಿಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

RELATED ARTICLES

Latest News