Sunday, April 12, 2026
Homeರಾಷ್ಟ್ರೀಯಪೊಲೀಸರಿಂದ ತಪ್ಪಿಸಿಕೊಳ್ಳಲು ಹಳಿ ಮೇಲೆ ಓಡುತ್ತಿದ್ದ ಮೂವರ ಮೇಲೆ ಗೂಡ್ಸ್ ರೈಲು ಹರಿದು ಸಾವು

ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳಿ ಮೇಲೆ ಓಡುತ್ತಿದ್ದ ಮೂವರ ಮೇಲೆ ಗೂಡ್ಸ್ ರೈಲು ಹರಿದು ಸಾವು

Three run over by goods train in Palghar; kin claim they were fleeing police

ಪಾಲ್ಘರ್‌, ಮಾ. 14 (ಪಿಟಿಐ) ಪೊಲೀಸರಿಂದ ತಪ್ಪಿಸಿಕೊಳ್ಳಲು ರೈಲ್ವೇ ಹಳಿ ಮೇಳೆ ಓಡುತ್ತಿದ್ದ ಮೂವರ ಮೇಲೆ ರೈಲು ಹರಿದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ ನಡೆದಿದೆ. ಅಪಘಾತದ ಸಮಯದಲ್ಲಿ ಪೊಲೀಸರು ಅವರನ್ನು ಬೆನ್ನಟ್ಟುತ್ತಿದ್ದಾಗ ಮೂವರು ಹಳಿಗಳ ಮೇಲೆ ಓಡುತ್ತಿದ್ದರು ಎಂದು ಅವರ ದುಃಖಿತ ಕುಟುಂಬಗಳು ಹೇಳಿಕೊಂಡಿವೆ.

ಪಾಲ್ಘರ್‌ ಪೂರ್ವದ ವೀರೇಂದ್ರ ನಗರ ಪ್ರದೇಶದ ನಿವಾಸಿಗಳಾದ ಸ್ವಪ್ನಿಲ್‌ ಶೈಲೇಶ್‌ ಪಲಾಂಡೆ (23), ಕುನಾಲ್‌ ಕುಮಾರ್‌ ದುಬ್ಲಾ (23) ಮತ್ತು ಅಫ್ರೋಜ್‌ ಖಲೀಲ್‌ ಶೇಖ್‌ (28) ರಾತ್ರಿ 8.30 ರಿಂದ 9 ಗಂಟೆಯ ನಡುವೆ ಸರಕು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಎಂದು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ.

ಮೂವರು ಪುರುಷರು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸರಕು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದರು. ಪೊಲೀಸರು ಅವರನ್ನು ಬೆನ್ನಟ್ಟಿದ ಅಥವಾ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪಾಲ್ಘರ್‌ ಜಿಆರ್‌ಪಿಯ ಹಿರಿಯ ಇನ್‌್ಸಪೆರ್ಕ್ಟ ಸಚಿನ್‌ ಇಂಗವಾಲೆ ಪಿಟಿಐಗೆ ತಿಳಿಸಿದ್ದಾರೆ.

ಅಪಘಾತ ನಡೆದ ಸ್ವಲ್ಪ ಸಮಯದ ನಂತರ ಜಿಆರ್‌ಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಆದಾಗ್ಯೂ, ಅಪಘಾತಕ್ಕೂ ಮುನ್ನ, ಸಾಮಾನ್ಯ ಉಡುಪಿನಲ್ಲಿದ್ದ ಕೆಲವು ಪೊಲೀಸ್‌‍ ಸಿಬ್ಬಂದಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಹತ್ತಿರದ ರೈಲ್ವೆ ಹಳಿಗಳ ಕಡೆಗೆ ಓಡಿಹೋದ ಯುವಕರು, ನಂತರ ಸರಕು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದರು.ಜಿಆರ್‌ಪಿ ಸದ್ಯಕ್ಕೆ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದೆ ಮತ್ತು ಅಪಘಾತದ ಸಂದರ್ಭಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯು ನಿವಾಸಿಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿರುವುದರಿಂದ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸ್ಥಳೀಯ ಅಧಿಕಾರಿಗಳು ಪ್ರದೇಶದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

RELATED ARTICLES

Latest News