ಗಡ್ಚಿರೋಲಿ, ಡಿ.20 (ಪಿಟಿಐ) – ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮಣ್ಣು ಚಲಿಸುವ ಯಂತ್ರ ಮತ್ತು ಟ್ಯಾಂಕರ್‍ಗೆ ಬೆಂಕಿ ಹಚ್ಚಿದ್ದಾರೆ. ಇಂದು ನಸುಕಿನ ಜಾವ ದಾಳಿ ನಡೆಸಿದ ನಕ್ಸಲರು ಏಕಾಏಕಿ ರಸ್ತೆಯಲ್ಲಿ ನಿಂತಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲೇ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಸಿದ್ಧತೆ : ಗುಂಡೂರಾವ್
ಮಹಾರಾಷ್ಟ್ರ-ಛತ್ತೀಸ್‍ಗಢ ಗಡಿಯಲ್ಲಿರುವ ಹಿದೂರ್ -ದೊಡೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಯರಕೋಟಿಗೆ ಮತ್ತಷ್ಟು ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಕ್ಸಲೀಯರು ಯಂತ್ರ ಮತ್ತು ಕೆಲಸದಲ್ಲಿ ತೊಡಗಿದ್ದ ವಾಹನವನ್ನು ಸುಟ್ಟು ಹಾಕಿದ್ದಾರೆ.
ಈ ಪ್ರದೇಶದಲ್ಲಿ ನಕ್ಸಲೀಯರು ಕರಪತ್ರವನ್ನೂ ಹಾಕಿದ್ದು, ಡಿಸೆಂಬರ್ 22 ರಂದು ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.