ಉಡುಪಿ/ಚಿಕ್ಕಮಗಳೂರು, ಫೆ.7- ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಕ್ಸಲರ ಚಟುವಟಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಬೈಂದೂರು ತಾಲ್ಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಸೇರಿದಂತೆ ಚಿಕ್ಕಮಗಳೂರಿನ ಹಲವೆಡೆ ಅರಣ್ಯ ಪ್ರದೇಶದಲ್ಲಿ ನಕ್ಸಲರ ಓಡಾಟ ಕಂಡುಬಂದಿದ್ದು, ಮತ್ತೆ ನಕ್ಸಲ್ ನಿಗ್ರಹ ಪಡೆ ಚುರುಕಾಗಿದೆ.
ಮೂಲಗಳ ಪ್ರಕಾರ, ಉಡುಪಿಯ ಹೆಬ್ರಿ ಮೂಲದ ವಿಕ್ರಮ್‍ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರಿನ ವಿವಿಧ ಗ್ರಾಮಗಳಿಗೆ ಶಸ್ತ್ರಸಜ್ಜಿತರಾಗಿ ಬಂದು ಕೆಲವು ಸೂಚನೆಗಳನ್ನು ನೀಡಿ ಹೋಗಿದ್ದಾರೆ. ಇದಲ್ಲದೆ ಕೆಲವೆಡೆ ಬಿತ್ತಿಪತ್ರಗಳು ಕೂಡ ಸಿಕ್ಕಿರುವುದರಿಂದ ಮತ್ತೆ ನಕ್ಸಲ್ ಚಟುವಟಿಕೆ ಶುರುವಾಗಿರುವುದು ಆತಂಕ ಮೂಡಿಸಿದೆ.
ಛತ್ತೀಸ್‍ಗಢದಲ್ಲಿ ನಕ್ಸಲೀಯರಿಂದ ಗ್ರಾಮಸ್ಥನ ಹತ್ಯೆ
ಗೃಹ ಇಲಾಖೆ ಅಕಾರಿಗಳು ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥರಿಗೆ ಶೋಧ ಕಾರ್ಯಾಚರಣೆ ಕೈಗೊಳ್ಳಲು ಸೂಚನೆ ನೀಡಿರುವುದರಿಂದ ಮತ್ತೊಮ್ಮೆ ಎನ್‍ಎನ್‍ಎಫ್ ಪಡೆಗಳು ಆಕ್ಟೀವ್ ಆಗಿವೆ. ಮುಂದಿನ ಐದು ದಿನಗಳ ಕಾಲ ಕೂಂಬಿಂಗ್ ಆಪರೇಷನ್ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.