Saturday, September 14, 2024
Homeರಾಷ್ಟ್ರೀಯ | Nationalನಿತಿನ್‌ ಪಾಟೀಲ್‌, ಧೈರ್ಯಶೀಲ್‌ ಪಾಟೀಲ್‌ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ನಿತಿನ್‌ ಪಾಟೀಲ್‌, ಧೈರ್ಯಶೀಲ್‌ ಪಾಟೀಲ್‌ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

NCP's Nitin Patil, BJP's Dhairyasheel Patil Elected To Rajya Sabha

ಮುಂಬೈ,ಆ.27- ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಪಕ್ಷದ ನಿತಿನ್‌ ಪಾಟೀಲ್‌ ಹಾಗೂ ಬಿಜೆಪಿಯ ಧೈರ್ಯಶೀಲ್‌ ಪಾಟೀಲ್‌ ಅವರುಗಳು ಅವಿರೋಧವಾಗಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಪಿಯೂಷ್‌ ಗೋಯಲ್‌ ಮತ್ತು ಉದಯನರಾಜೆ ಭೋಸಲೆ ಅವರಿಂದ ತೆರವಾದ ಸ್ಥಾನಗಳಿಗೆ ಅಜಿತ್‌ ಪವಾರ್‌ ನೇತತ್ವದ ಎನ್‌ಸಿಪಿಯ ನಿತಿನ್‌ ಪಾಟೀಲ್‌ ಮತ್ತು ಬಿಜೆಪಿಯ ಧೈರ್ಯಶೀಲ್‌ ಪಾಟೀಲ್‌ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭೋಸಲೆ ಅವರು ಸತಾರಾ ಲೋಕಸಭಾ ಕ್ಷೇತ್ರದಿಂದ ಗೆದ್ದರೆ, ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಮುಂಬೈ ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಎನ್‌ಸಿಪಿ ಮತ್ತು ಬಿಜೆಪಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತಕ ಒಕ್ಕೂಟದ ಭಾಗವಾಗಿದೆ.

RELATED ARTICLES

Latest News