Saturday, September 14, 2024
Homeರಾಷ್ಟ್ರೀಯ | National70 ವರ್ಷದ ವೃದ್ದೆ ಮೇಲೆ ಅತ್ಯಾಚಾರವೆಸಿಗಿ ಕೊಂದು 2 ದಿನ ಶವದ ಜೊತೆಗಿದ್ದ ಕಾಮುಕ

70 ವರ್ಷದ ವೃದ್ದೆ ಮೇಲೆ ಅತ್ಯಾಚಾರವೆಸಿಗಿ ಕೊಂದು 2 ದಿನ ಶವದ ಜೊತೆಗಿದ್ದ ಕಾಮುಕ

Man Rapes, Kills 70-Year-Old Woman, Stays With Body For 2 Days In Maharashtra

ಲಾತೂರ್‌,ಆ.27- ಎಪ್ಪತ್ತು ವರ್ಷದ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯನ್ನು ಕೊಲೆ ಮಾಡಿದ ಕಾಮುಕನೊಬ್ಬ ಶವದ ಜೊತೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ.

ವೃದ್ದೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶವದೊಂದಿಗೆ ಎರಡು ದಿನ ಕಳೆದ ಕಾಮುಕನನ್ನು 35 ವರ್ಷದ ಮನ್ಸೂರ್‌ ಶೇಕ್‌ ಎಂದು ಗುರುತಿಸಲಾಗಿದೆ.

ಔಸಾ ತಹಸಿಲ್‌‍ನ ಭೇಟಾದಲ್ಲಿರುವ 35ವರ್ಷದ ಮನ್ಸೂರ್‌ ಶೇಕ್‌ ಅವರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತನಿಖೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ದೇಹವು ಕೊಳೆಯಲು ಪ್ರಾರಂಭಿಸಿದ್ದರು ಶೇಖ್‌ ಮತದೇಹದೊಂದಿಗೆ ಮನೆಯಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆ ಭೇಟಾದಿಂದ ಸುಮಾರು 10 ಕಿಲೋಮೀಟರ್‌ ದೂರದಲ್ಲಿರುವ ಬೋರ್ಗಾಂವ್‌ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ನೆಲೆಸಿದ್ದರು. ಶೇಖ್‌ ಆಕೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿದ್ದಾನೆ.

ಹೆಂಡತಿ, ತಾಯಿ ದೂರವಾಗಿದ್ದು ಆತ ಒಬ್ಬಂಟಿಯಾಗಿದ್ದ, ಆತ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್‌ನನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

Latest News