ಕಠಂಡು,ಸೆ.29-ನೇಪಾಳದಾದ್ಯಂತ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಕಳೆದೆರಡು ದಿಣಗಳಿಂದ ಸುರಿಯುತ್ತಿರುವ ವರ್ಷಧಾರೆಯಿಂದ ಜಲಪ್ರಳಯ ಉಂಟಾಗಿದ್ದು ,ಪೂರ್ವ ಮತ್ತು ಮಧ್ಯ ನೇಪಾಳದ ದೊಡ್ಡನಗರಗಳುಮುಳುಗಿವೆ, ದೇಶದ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹಗಳು ಜನರು ಕಂಗಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಹ, ಭೂಕುಸಿತ ಮತ್ತು ಪ್ರವಾಹದಲ್ಲಿ 64 ಜನರು ನಾಪತ್ತೆಯಾಗಿದ್ದಾರೆ ಕಠಂಡು ಕಣಿವೆಯಲ್ಲಿ ಅತಿ ಹೆಚ್ಚು 48 ಸಾವುಗಳು ಸಂಭವಿಸಿವೆ.ಮತ್ತು 45 ಜನರು ಗಾಯಗೊಂಡಿದ್ದಾರೆ.
ಸುಮಾರು 195 ಮನೆಗಳು ಮತ್ತು ಎಂಟು ಸೇತುವೆಗಳು ಹಾನಿಗೊಳಗಾಗಿವೆ. ಭದ್ರತಾ ಸಿಬ್ಬಂದಿ ಸುಮಾರು 3,100 ಜನರನ್ನು ರಕ್ಷಿಸಿದ್ದಾರೆ. 40-45 ವರ್ಷಗಳಲ್ಲಿ ಕಠಂಡು ಕಣಿವೆಯಲ್ಲಿ ಇಂತಹ ವಿನಾಶಕಾರಿ ಪ್ರವಾಹವನ್ನು ನೋಡಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಸಾವಿನ ಸಂಖ್ಯೆ 102 ಕ್ಕೆ ತಲುಪಿದೆ ಎಂದು ಸಶಸ್ತ್ರ ಪೊಲೀಸ್ ಪಡೆ ಹೇಳಿಕೆಯಲ್ಲಿ ತಿಳಿಸಿದೆ. ಕಠಂಡುವಿನಲ್ಲಿ ಈ ರೀತಿ ಪರಿಸರ ವೈಪರಿತ್ಯ ನಾನು ಹಿಂದೆಂದೂ ನೋಡಿಲ್ಲ ಎಂದು ಇಂಟರ್ನ್ಯಾಶನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್ಮೆಂಟ್ನ ಹವಾಮಾನ ಮತ್ತು ಪರಿಸರ ತಜ್ಞ ಅರುಣ್ ಭಕ್ತ ಶ್ರೇಷ್ಠ ಹೇಳಿದರು.
ಪೂರ್ವ ಮತ್ತು ಮಧ್ಯ ನೇಪಾಳದ ಹೆಚ್ಚಿನ ಭಾಗಗಳಲ್ಲಿ ನಿರಂತರ ಮಳೆ ಸುರಿದ ನಂತರ ಕಠಂಡುವಿನ ಮುಖ್ಯ ನದಿ ಬಾಗತಿ ಅಪಾಯದ ಮಟ್ಟಕ್ಕಿಂತ ಮೇಲೆ ಹರಿಯುತ್ತಿದೆ ಎಂದುೆ.ಬಂಗಾಳಕೊಲ್ಲಿಯಲ್ಲಿ ಕಡಿಮೆ ವಾಯಭಾರ ಕುಸಿತದಿಂದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಸುರಿದಿದೆ ಇದನ್ನು ಅಸಾಧಾರಣವಾದ ಮಳೆಗೆ ಎನ್ನಬಹುದು ಎಂದು ಅದು ಹೇಳಿದೆ.
ಹವಾಮಾನ ಬದಲಾವಣೆಯು ಏಷ್ಯಾದಾದ್ಯಂತ ಮಳೆಯ ಪ್ರಮಾಣ ಮತ್ತು ಸಮಯವನ್ನು ಬದಲಾಯಿಸುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ,ಇದೇ ಮಳೆ ಹೆಚ್ಚಳ , ಪ್ರವಾಹದ ಪ್ರಭಾವದ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ವ್ಯಾಖ್ಯಾನಿಸಲಾಗಿದೆ.