ಬೆಂಗಳೂರು,ಆ.21– ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಈಗ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.
ಈಗಾಗಲೇ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆ(ಪ್ರಾಸಿಕ್ಯೂಷನ್) ನಡೆಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿರುವ ಬೆನ್ನಲ್ಲೇ ತಮಗೆ ಇಂತಹ ಕಡೆಗೆ ನಿವೇಶನ ನೀಡುವಂತೆ ಪಾರ್ವತಿ ಸಿದ್ದರಾಮಯ್ಯ ಮುಡಾ ಅಧಿಕಾರಿಗಳಿಗೆ ಪತ್ರ ಬರೆದಿರು ವುದು ಬೆಳಕಿಗೆ ಬಂದಿದೆ.
ವಿಶೇಷವೆಂದರೆ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಬಲವಾಗಿ ಸಮರ್ಥಿಸಿಕೊಂಡು ನಾನಾಗಲಿ, ನನ್ನ ಧರ್ಮಪತ್ನಿಯಾಗಲಿ ಇಂತಹ ಕಡೆಯೇ ನಿವೇಶನ ನೀಡಬೇಕೆಂದು ಪತ್ರ ಬರೆದಿದ್ದೇವೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.
ಪತ್ರಿಕಾಗೋಷ್ಟಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಾನಾಗಲಿ, ನನ್ನ ಕುಟುಂಬದ ಯಾವುದೇ ಸದಸ್ಯರು ನಿರ್ಧಿಷ್ಟ ಸ್ಥಳದಲ್ಲೇ ನಿವೇಶನ ಬೇಕೆಂದು ಪತ್ರ ಬರೆದಿಲ್ಲ. ಅವರು ಕೊಟ್ಟ ಕಡೆ ಕಾನೂನುಬದ್ಧವಾಗಿ ನಿವೇಶನ ಪಡೆದುಕೊಂಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಇದೀಗ ದಾಖಲೆಗಳ ಪ್ರಕಾರ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಮೈಸೂರಿನ ವಿಜಯನಗರದ ಎರಡು ಮತ್ತು ಮೂರನೇ ಹಂತದಲ್ಲಿ ತಮ ಭೂಮಿಗೆ 50:50ರ ಅನುಪಾತದಲ್ಲಿ ಪರ್ಯಾಯ ನಿವೇಶನ ನೀಡಬೇಕೆಂದು ಅಂದಿನ ಮುಡಾ ಆಯುಕ್ತರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಪಾರ್ವತಿಯವರು ಖುದ್ದು ಪತ್ರ ಬರೆದು ಅದರಲ್ಲಿ ಸಹಿ ಹಾಕಿ ನಮಗೆ ಮೈಸೂರಿನ ವಿಜಯನಗರ ಮತ್ತು 2ನೇ ಮತ್ತು 3ನೇ ಹಂತದಲ್ಲಿ ನಿವೇಶನ ನೀಡಬೇಕೆಂದು ಕೋರಿ ಪತ್ರ ಬರೆದಿದ್ದು ಬಹಿರಂಗಗೊಂಡಿದೆ.
ಮತ್ತೊಂದು ವಿಶೇಷವೆಂದರೆ ಈ ಪ್ರಕರಣ ಹೊರಬರುತ್ತಿದ್ದಂತೆ ಮುಡಾ ಅಧಿಕಾರಿಗಳು ನಡೆಸಿರುವ ಕರಾಮತ್ತು ಕೂಡ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.
ಏಕೆಂದರೆ ನಿರ್ಧಿಷ್ಟ ಸ್ಥಳದಲ್ಲಿ ನಿವೇಶನ ನೀಡಬೇಕೆಂದು ಕೋರಿದ್ದ ಪತ್ರಕ್ಕೆ ಮುಡಾ ಅಧಿಕಾರಿಗಳು ವೈಟ್ನರ್ ಹಾಕಿ ಮುಚ್ಚುಹಾಕುವ ಪ್ರಯತ್ನ ನಡೆಸಿದ್ದಾರೆ ಎಂಬ ಶಂಕೆ ಕಾಡುತ್ತಿದೆ.
ಪ್ರಕರಣ ಹೊರಬರುತ್ತಿದ್ದಂತೆ ಅಧಿಕಾರಿಗಳು ವಿಜಯನಗರದ 2 ಮತ್ತು 3ನೇ ಹಂತದಲ್ಲಿ ನಿವೇಶನ ನೀಡಬೇಕೆಂಬ ಜಾಗಕ್ಕೆ ವೈಟ್ನರ್ ಹಾಕಿದ್ದಾರೆ. ಇದು ಸಹಜವಾಗಿ ಅನುಮಾನಗಳನ್ನು ಹುಟ್ಟುಹಾಕಿದೆ.
ಪ್ರಾಧಿಕಾರ ಬಡಾವಣೆ ನಿರ್ಮಿಸಿ ನಿವೇಶನ ಹಂಚಿದ ಮೇಲೆ ಆ ಜಮೀನನ್ನು ಸಿಎಂ ಪತ್ನಿಯ ಸಹೋದರ ಖರೀದಿಸಿದ್ದರೇ ಎಂಬ ಪ್ರಶ್ನೆಗೂ ಕಾರಣವಾಗಿದೆ. ಸಿಎಂ ಪತ್ನಿ ಪ್ರಾಽ ಕಾರಕ್ಕೆ ಬರೆದ ಪತ್ರದಲ್ಲಿ ಅದರ ಸ್ಪಷ್ಟ ಉಲ್ಲೇಖ.
ಪತ್ರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಽ ಕಾರ 2001ರಲ್ಲೇ ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿದೆ ಎಂದು ಪತ್ರದಲ್ಲಿ ನಮೂದಾಗಿದೆ. ಕೆಸರೆ ಗ್ರಾಮದ ಜಮೀನನ್ನು ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ವಾಽೕನ ಪಡಿಸಿಕೊಂಡಿತ್ತು.
ಆದರೆ ಈ ಜಮೀನನ್ನು ಸಿಎಂ ಪತ್ನಿ ಸಹೋದರ ಖರೀದಿ ಮಾಡಿರುವುದು 2004ರಲ್ಲಿ. ಹಾಗಾದರೆ ಸ್ವಾಽೕನ ಪಡಿಸಿಕೊಂಡು ನಿವೇಶನ ಹಂಚಿದ ಜಾಗವನ್ನು ಸಿಎಂ ಸಹೋದರ ಹೇಗೆ ಖರೀದಿ ಮಾಡಿದರು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ನೋಂಣಿ ಸಂಖ್ಯೆಯಲ್ಲಿ ವ್ಯತ್ಯಾಸ:
ಮುಡಾದಿಂದ ಮಂಜೂರಾದ ನಿವೇಶನಗಳ ಸಂಖ್ಯೆಗೂ, ಮುಡಾ ಅಽ ಕಾರಿಗಳು ಸರಕಾರಕ್ಕೆ ನೀಡಿರುವ ನಿವೇಶನಗಳ ನೋಂದಣಿ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸ ಇರುವುದು ಕಂಡುಬಂದಿದೆ.
ನಾಲ್ಕು ವರ್ಷದಲ್ಲಿ 4,829 ನಿವೇಶನ ಮಂಜೂರಿ ಪತ್ರ ನೀಡಲಾಗಿದೆ. 2021ರ ಏಪ್ರಿಲ್‌ನಿಂದ 2024ರ ಜುಲೈ 3ರವರೆಗೆ ಮುಡಾದಲ್ಲಿ ಮಂಜೂರಾತಿ ಪತ್ರ ನೀಡಲು ಬಳಕೆ ಆಗಿರುವ ಸೆಕ್ಯೂರಿಟಿ ಬಾಂಡ್ ಶೀಟ್ ದಾಖಲೆಯು ಲಭ್ಯ ವಾಗಿದೆ. ಕೇವಲ 54 ದಿನಗಳಲ್ಲಿ ಅಂದರೆ, 2024ರ ಮೇ 9ರಿಂದ ಜುಲೈ 3ರವರೆಗೆ 1,200 ಮಂಜೂರಾತಿ ಪತ್ರ ಬಳಕೆ ಮಾಡಿಕೊಳ್ಳಲಾಗಿದೆ.
ಮುಡಾದಲ್ಲಿ ಬಾರ್‌ಕೋಡ್ ಇರುವ ವಿಶಿಷ್ಟ ಬಾಂಡ್ ಶೀಟ್ ಬಳಸಿ ಅಽ ಕೃತವಾಗಿ ಮಂಜೂರಾತಿ ಪತ್ರ ನೀಡಲಾಗುತ್ತದೆ. ಸೀಮಿತ ಸಂಖ್ಯೆಯಲ್ಲಿ ಪತ್ರಗಳನ್ನು ಮುದ್ರಿಸಿದ ಬಳಿಕ ಅವುಗಳನ್ನು ಎಂಜಿನಿಯರ್ ದರ್ಜೆಯ ಅಽ ಕಾರಿಯ ವಶಕ್ಕೆ ನೀಡಲಾಗುತ್ತದೆ. ಯಾರೇ ಅಂತಹ ಪತ್ರಗಳನ್ನು ಬಳಸಿದರೂ ರಿಜಿಸ್ಟರ್‌ನಲ್ಲಿ ಪ್ರತಿ ಪತ್ರದ ವಿವರ ನಮೂದಿಸಬೇಕು. ಅದರಲ್ಲಿ ನಿವೇಶನ ಮಂಜೂರಾತಿ ಆದೇಶವನ್ನು ಮುದ್ರಿಸಿದ ಬಳಿಕ, ಯಾರಿಗೆ ಯಾವ ನಿವೇಶನ ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ನೀಡಬೇಕು. ಆದರೆ, ಸಾಕಷ್ಟು ಪ್ರಕರಣಗಳಲ್ಲಿ ಮಾಹಿತಿಯನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ.
ನಿಯಮಗಳ ಪ್ರಕಾರ, ಮುಡಾ ಆಯುಕ್ತರಿಗೆ ಮಾತ್ರ ಈ ಪತ್ರ ಬಳಸುವ, ಇಲ್ಲವೇ ಬಳಕೆಗೆ ಅನುಮತಿ ನೀಡುವ ಅಧಿಕಾರವಿದೆ. ಆಯುಕ್ತರ ಒಪ್ಪಿಗೆ ಪಡೆದು ಕಾರ್ಯದರ್ಶಿಗಳು ಇದನ್ನು ಬಳಸಬಹುದು. ಹಾಳೆ ಹರಿದರೂ ಅದನ್ನು ಸಂಬಂಧಿಸಿದ ವಿಭಾಗಕ್ಕೆ ಹಿಂದಿರುಗಿಸಿ ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಆದರೆ ನಿಯಮ ಮೀರಿ ಸಿಬ್ಬಂದಿಗೂ ಪತ್ರ ದೊರೆತು ದುರ್ಬಳಕೆಯಾಗಿದೆ ಎನ್ನುತ್ತಾರೆ ಮುಡಾ ಅಧಿಕಾರಿಯೊಬ್ಬರು.
ಇಂತಹ ಪತ್ರಗಳನ್ನು ಬಳಸಿ ಅನಧಿಕೃತವಾಗಿ ನಿವೇಶನಗಳನ್ನು ಅನ್ಯರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವ ಸಾಧ್ಯತೆ ಹೆಚ್ಚಿದೆ. ಸಾವಿರಾರು ಸಂಖ್ಯೆಯಲ್ಲಿ ಪತ್ರಗಳ ಬಳಕೆ ಆಗಿದ್ದು, ಭಾರಿ ಪ್ರಮಾಣದ ಅಕ್ರಮ ನಡೆದಿದೆ. ಹೀಗಾಗಿ ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಈ ಹಿಂದಿನ ಆಯುಕ್ತರು, ಕಾರ್ಯದರ್ಶಿ, ವಿಶೇಷ ತಹಸೀಲ್ದಾರ್, ಆಯುಕ್ತರ ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ.
ಏನಿದು ಬಾಂಡ್ ಶೀಟ್?:
ಮುಡಾದಲ್ಲಿ ಈ ಹಿಂದೆ ಅಧಿಕಾರಿಗಳ ಪತ್ರ, ಸಹಿ ನಕಲು ಮಾಡಿ ನಿವೇಶನಗಳ ಅಕ್ರಮ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಸುತ್ತಿದ್ದ ಜಾಲ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ 2007ರಲ್ಲಿ ಮುಡಾದಲ್ಲಿ ವಿಶೇಷ ವಿನ್ಯಾಸದ ಸೆಕ್ಯುರಿಟಿ ಬಾಂಡ್ ಶೀಟ್ ರೂಪದ ಮಂಜೂರಾತಿ ಪತ್ರಗಳ ಬಳಕೆ ಆರಂಭವಾಯಿತು. ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳ ರೀತಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ನಕಲು ಮಾಡಲು ಆಗದು. ಪ್ರತಿ ಪತ್ರಕ್ಕೂ ಬಾರ್ ಕೋಡ್ ಆಧರಿತ ವಿಶಿಷ್ಟ ಸಂಖ್ಯೆ ಇದ್ದು, ಸ್ಕ್ಯಾನ್ ಮಾಡಿದಲ್ಲಿ ಅದರ ಆಸಲಿಯತ್ತು ಪತ್ತೆ ಮಾಡಬಹುದಾಗಿದೆ.