Saturday, September 14, 2024
Homeರಾಜ್ಯಸಾಯಿ ವೆಂಕಟೇಶ್ವರ ಮಿನರಲ್ಸ್ ಕಡತದಲ್ಲಿರುವುದು ನನ್ನ ಹಸ್ತಾಕ್ಷರವಲ್ಲ : ಹೆಚ್ಡಿಕೆ

ಸಾಯಿ ವೆಂಕಟೇಶ್ವರ ಮಿನರಲ್ಸ್ ಕಡತದಲ್ಲಿರುವುದು ನನ್ನ ಹಸ್ತಾಕ್ಷರವಲ್ಲ : ಹೆಚ್ಡಿಕೆ

ಬೆಂಗಳೂರು,ಆ.21- ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆದೇಶ ನನ್ನ ಸ್ವಹಸ್ತಾಕ್ಷರವಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಜೆಪಿಭವನದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಯಾಗಿದ್ದಾಗ ನನ್ನ ಬಳಿ ಆ ಕಂಪನಿಯ ಕಡತ ಬಂದಿ ದೆಯೇ ಎಂಬುದು ಸಾಬೀತಾಗಬೇಕು. ಆ ಕಂಪನಿ ವಂಚಕ ಕಂಪನಿ ಎಂಬ ಆರೋಪವಿದೆ ಎಂದರು.

ಆಡಳಿತ ವ್ಯವಸ್ಥೆಯಲ್ಲಿ ಕೆಳಹಂತದಿಂದ ಅಧಿಕಾರಿಗಳು ಕಡತ ತಯಾರಿಸಿ ಸಿದ್ದಪಡಿಸುತ್ತಾರೆ. ಮುಖ್ಯಮಂತ್ರಿ ಮುಂದೆ ನೂರಾರು ಕಡತ ಬರುತ್ತವೆ. ಇದು ಬಂದಿತ್ತೇ ಇಲ್ಲವೇ ಎಂಬುದು ಸಾಬೀತಾಗಬೇಕು ಕಡತದಲ್ಲಿರುವುದು ನನ್ನ ಸ್ವಹಸ್ತಾಕ್ಷರದಲ್ಲ. ಎಫ್‌ಎಸ್‌‍ಎಲ್‌ ತನಿಖೆ ಬೇಕಾದರೂ ನಡೆಯಲಿ ಎಂದು ಹೇಳಿದರು.

ಕಳೆದ ವರ್ಷ ಮೇನಲ್ಲಿ ಸರ್ಕಾರ ರಚನೆಯಾದರೂ ಕಳೆದ ನವೆಂಬರ್‌ನಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯ ಪಾಲರ ಅನುಮತಿ ಕೋರಲಾಗಿದೆ. ಎರಡು ತಿಂಗಳ ಹಿಂದಷ್ಟೇ ಕೇಂದ್ರ ಸಚಿವನಾಗಿದ್ದೇನೆ ಎಂದರು. ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲು ಹೇಳಿತ್ತು. 2017ರಲ್ಲಿ ವಿಶೇಷ ತನಿಖಾ ತಂಡಕ್ಕೆ ತನಿಖೆ ನಡೆಸಿ ವರದಿ ಸಲ್ಲಿಸಲು ಹೇಳಲಾಗಿತ್ತು. ಇದುವರೆಗೂ ತನಿಖೆಯ ಪೂರ್ಣ ವರದಿಯನ್ನು ಎಸ್‌‍ಐಟಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಿಲ್ಲ. ಸುಪ್ರೀಂಕೋರ್ಟ್‌ ರಾಜ್ಯಪಾಲರ ಅನುಮತಿ ಕೋರಿ ಎಂದು ಹೇಳಿಲ್ಲ. ತನಿಖೆಗೆ ಅನುಮತಿಯನ್ನೇ ನೀಡಿತ್ತು ಎಂದರು.

ಕಾನೂನು ಹೋರಾಟ: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿಯನ್ನು ಎಸ್‌‍ಐಟಿ ಕೋರಿದೆ. ಈ ಹಿನ್ನಲೆಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್‌್ಸಗೆ ಸಂಬಂಧಿಸಿದ ಆರೋಪದ ಬಗ್ಗೆ ಸಾಧ್ಯವಿರುವ ಕಾನೂನು ಹೋರಾಟವನ್ನು ನಡೆಸು ವುದು ಅನಿವಾರ್ಯವಾಗಿದೆ ಎಂದು ಹೇಳಿದರು.

2006ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಸರ್ಕಾರಕ್ಕೆ ಬೆಂಬಲ ನೀಡಿದ ಪಕ್ಷದ ಶಾಸಕರೊಬ್ಬರಿಂದ ಗಣಿ ಮಾಲೀಕರಿಂದ 150 ಕೋಟಿ ರೂ. ಪಡೆದ ಆರೋಪ ಮಾಡಲಾಗಿತ್ತು. ಅದರ ಬಗ್ಗೆ ನ್ಯಾಯಾಂಗ ತನಿಖೆಗೆ ಯಾರೂ ಅರ್ಜಿ ಸಲ್ಲಿಸಿರಲಿಲ್ಲ. ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಆ ತನಿಖಾ ವರದಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್‌‍.ಎಂ.ಕೃಷ್ಣ, ಧರ್ಮಸಿಂಗ್‌ ಹೆಸರು ಪ್ರಸ್ತಾಪವಾಗಿ ಯಾವುದೇ ರೀತಿಯ ಕ್ರಮಕ್ಕೆ ಶಿಫಾರಸ್ಸು ಮಾಡದೆ ಅಂದಿನ ಸರ್ಕಾರಕ್ಕೆ ಬಿಡಲಾಗಿತ್ತು ಎಂದರು.

ಜಂತ್ಕಲ್‌ ಕಂಪನಿ ಕಂಪನಿಗೆ ಸಂಬಂಧಿಸಿದ ನನ್ನ ಮೇಲಿನ ಆರೋಪ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿ ಸಾಯಿ ವೆಂಕಟೇಶ್ವರ ಕಂಪನಿಗೆ ಸಂಬಂಧಿಸಿದ ಪ್ರಕರಣವನ್ನು ಮುಂದುವರೆಸಲು ಆದೇಶ ನೀಡಿತ್ತು. ಎಸ್‌‍.ಎಂ.ಕೃಷ್ಣ ಅವರಿಗೆ ಸುಪ್ರೀಂಕೋರ್ಟ್‌ ರಿಲೀಫ್‌ ಕೊಟ್ಟಿದೆ.

2014ರಲ್ಲಿ ಸಾಯಿ ವೆಂಕಟೇಶ್ವರ ಪ್ರಕರಣಕ್ಕೆ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದೆ. ಆಗ ರಾಜ್ಯ ಸರ್ಕಾರ ಎಸ್‌‍ಐಟಿ ತನಿಖೆಗೆ ಅವಕಾಶವನ್ನು ಸುಪ್ರೀಂಕೋರ್ಟ್‌ನಲ್ಲಿ ಕೋರಿತ್ತು. 2017ರಲ್ಲಿ ಎಸ್‌‍ಐಟಿ ರಚನೆಯಾಗಿ ನನಗೆ ನೋಟಿಸ್‌‍ ನೀಡಿ ಹೇಳಿಕೆಯನ್ನು ದಾಖಲಿಸಿಕೊಂಡರು.

ಸುಪ್ರೀಂಕೋರ್ಟ್‌ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡಲು ನಿರ್ದೇಶನ ನೀಡಿತ್ತು ಎಂದು ಹೇಳಿದರು. ವಿಪರ್ಯಾಸವೆಂದರೆ 2018ರಲ್ಲಿ ಕಾಂಗ್ರೆಸ್‌‍ನವರೇ ನಮ ಜೊತೆಗೂಡಿ ಸರ್ಕಾರ ನಡೆಸಬೇಕಾಯಿತು ಎಂದರು. ಅಧಿಕಾರಿಯೊಬ್ಬರು ತಮ ಮಗನ ಖಾತೆಗೆ 20 ಲಕ್ಷ ರೂ. ಪಡೆದುಕೊಂಡಿದ್ದರು. ಅದನ್ನು ಬೆಳಕಿಗೆ ತಂದಿದ್ದು ನಾನೇ ಎಂದು ಹೇಳಿದರು.

RELATED ARTICLES

Latest News