Sunday, September 15, 2024
Homeಉದ್ಯೋಗ | Job newsಆ.30 ರಂದು ಬೃಹತ್‌ ಉದ್ಯೋಗ ಮೇಳ

ಆ.30 ರಂದು ಬೃಹತ್‌ ಉದ್ಯೋಗ ಮೇಳ

ಕನಕಪುರ, ಆ.21– ಯುವಜನರಿಗೆ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಜಿಲ್ಲೆಯ ಚನ್ನಪಟ್ಟಣ ಟೌನಿನ ಅಂಚೆಕಚೇರಿ ರಸ್ತೆ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆ.30 ರಂದು ಆಯೋಜಿಸಲಾಗಿದೆ ಎಂದು ತಾ.ಪಂ. ಇಒ ಭೈರಪ್ಪ ತಿಳಿಸಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಉದ್ಯೋಗಮೇಳದ ಅಭ್ಯರ್ಥಿಗಳು ನೋಂದಣಿ ಕುರಿತು ನಗರಸಭೆ ಹಾಗು ತಾಲ್ಲೂಕಿನ ಗ್ರಾಮಪಂಚಾಯತಿ ಕಚೇರಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು, ಪದವಿ, ವೃತ್ತಿಶಿಕ್ಷಣ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಜನರು, ನಿರುದ್ಯೋಗಿಗಳು ಈ ಉದ್ಯೋಗಾವಕಾಶದಲ್ಲಿ ಹೆಸರು ನೊಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನಗರಸಭಾ ಪೌರಾಯುಕ್ತ ಎಂ.ಎಸ್.ಮಹದೇವ್ ಮಾತನಾಡಿದರು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರು ನಿಮ್ಮ ಪೂರಕ ದಾಖಲೆಗಳೊಂದಿಗೆ ವೆಬ್ಸೈಟ್ skillconnect.kaushalkar.com ಮೂಲಕ ಅಥವಾ ಕಚೇರಿಗಳಲ್ಲಿ ಸಹ ನಿರಂತರವಾಗಿ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1800 599 9918 ಎಕ್‌್ಸಟೆನ್ಷನ್ ಸಂಖ್ಯೆ 4 ಕ್ಕೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೂ ಸಂಪರ್ಕಿಸಬಹುದಾಗಿದೆ. ಗ್ರೇಡ್2 ತಹಶೀಲ್ದಾರ್ ಶಿವಕುಮಾರ್ ಹಾಜರಿದ್ದರು.

RELATED ARTICLES

Latest News