Monday, November 25, 2024
Homeರಾಜ್ಯಹೊಸ ವರ್ಷಾಚರಣೆ ನಂತರ ಉಲ್ಬಣಿಸುತ್ತಿದೆ ಕೊರೊನಾ..

ಹೊಸ ವರ್ಷಾಚರಣೆ ನಂತರ ಉಲ್ಬಣಿಸುತ್ತಿದೆ ಕೊರೊನಾ..

ಬೆಂಗಳೂರು,ಜ.2- ಹೊಸ ವರ್ಷಾಚರಣೆ ನಂತರ ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ರಾಜ್ಯದಲ್ಲಿ ಸರಿಸುಮಾರು 1245ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 131 ಕೊರೊನಾ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟಾರೆ 634 ಕೊರೊನಾ ಸೋಂಕಿನ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ಬಾಗಲಕೋಟೆ- 7, ಬಳ್ಳಾರಿಯಲ್ಲಿ 33,ಬೆಳಗಾವಿ- 8, ಬೆಂಗಳೂರು ಗ್ರಾಮಾಂತರ-33,ಬೀದರ್- 4, ಚಾಮರಾಜನಗರ -30,ಚಿಕ್ಕಬಳ್ಳಾಪುರ-35, ಚಿಕ್ಕಮಗಳೂರಿನಲ್ಲಿ 15, ಚಿತ್ರದುರ್ಗ-15, ದಕ್ಷಿಣ ಕನ್ನಡದಲ್ಲಿ 45, ದಾವಣಗೆರೆ 13, ಧಾರವಾಡ-13, ಗದಗ- 16, ಹಾಸನ 43, ಹಾವೇರಿ-1, ಕಲಬುರಗಿ 12, ಕೊಡಗು 3, ಕೋಲಾರ 15, ಕೊಪ್ಪಳ 10, ಮೈಸೂರಿನಲ್ಲಿ 109, ಮಂಡ್ಯ 46, ರಾಯಚೂರು 5, ರಾಮನಗರದಲ್ಲಿ 12, ಶಿವಮೊಗ್ಗ 23, ತುಮಕೂರು 23, ಉಡುಪಿ 2, ಉತ್ತರಕರ್ನಾಟಕ-7 , ವಿಜಯನಗರ-32, ಹಾಗೂ ಯಾದಗಿರಿ ಒಂದು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಅನಕ್ಷರಸ್ಥ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಅಮೋಘ ಸಾಧನೆಗಳು

ಕರುನಾಡಲ್ಲಿ ಆರ್ಭಟ ಶುರು ಮಾಡಿರುವ ಜೆಎನ್.1 ಉಪತಳಿ:
ರಾಜ್ಯದಲ್ಲಿ ಬರೋಬ್ಬರಿ 199 ಜೆಎನ್ . 1 ಪ್ರಕರಣಗಳು ವರದಿಯಾಗಿವೆ. ಜಿನೋಮಿಕ್ ಸಿಕ್ವೇನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1ಸೋಂಕು ತಗುಲಿರೋದು ಕನ್ ಫರ್ಮ್ ಆಗಿದೆ. ಇದುವರೆಗೆ ಜಿನೋಮ್ ಸೀಕ್ವೆನ್ಸ್ ಟೆಸ್ಟ್‍ಗೆ 601 ಸ್ಯಾಂಪಲ್ಸ್‍ಗಳ್ ರವಾನೆ ಮಾಡಲಾಗಿದ್ದು, ಈ ಪೈಕಿ 262 ಮಂದಿಯ ವರದಿ ಕೈ ಸೇರಿದೆ.

ಡಿಸೆಂಬರ್ 25 ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್. 1 ತಗುಲಿರೋದು ಕನ್ ಫರ್ಮ್ ಆಗಿತ್ತು ನಿನ್ನೆ ಮತ್ತೆ 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್.1 ಸೋಂಕು ಇರುವುದು ದೃಢವಾಗಿದೆ. ಇಲ್ಲಿಯವರೆಗೆ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ, 28 ಜನರಿಗೆ ಎಕ್ಸ್‍ಬಿಬಿ ಉಪ ತಳಿ ಸೋಂಕು ಪತ್ತೆಯಾಗಿರುವುದು ಕಂಡುಬಂದಿದೆ.

RELATED ARTICLES

Latest News