Saturday, February 24, 2024
Homeರಾಜ್ಯಅನಕ್ಷರಸ್ಥ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಅಮೋಘ ಸಾಧನೆಗಳು

ಅನಕ್ಷರಸ್ಥ ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಅಮೋಘ ಸಾಧನೆಗಳು

ಬೆಂಗಳೂರು,ಜ.2- ಅಧಿಕಾರಕ್ಕೆ ಬಂದ ದಿನದಿಂದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳು ಎಂದು ಟ್ವೀಟ್ ಮೂಲಕ ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ. ಅಪ್ರಯೋಜಕ ಅಸಮರ್ಥರ ಕೈಗೆ ಶಿಕ್ಷಣ ಇಲಾಖೆಯನ್ನು ಕೊಟ್ಟರೆ ಏನಾಗುತ್ತದೆ ಅನ್ನುವುದಕ್ಕೆ ಈ ಪ್ರಕರಣಗಳೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.


ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೋಘ ಸಾಧನೆಗಳು

  • ಶಾಲಾ ಮಕ್ಕಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್,
  • ಚೆಕ್ ಬೌನ್ಸ್ ಮಾಡಿಸಿ ವಂಚನೆ,
  • ಪಠ್ಯ ಪರಿಷ್ಕರಣೆ ಮೂಲಕ ಎಡಬಿಡಂಗಿ ಸಿದ್ಧಾಂತ ಹೇರಿಕೆ
  • ಮೊಟ್ಟೆ ವಿತರಣೆ ಶಿಕ್ಷಕರ ಜೇಬಿಗೆ ಕತ್ತರಿ
  • ಅಪಾಯದ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು… ಬಿಜೆಪಿ ಎಂದು ವ್ಯಂಗ್ಯವಾಡಿದೆ.
    ಇನ್ನೊಂದು ಟ್ವೀಟ್ ಮಾಡಿರುವ ಬಿಜೆಪಿ,ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿತಕ್ಕಾಗಿ 10 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳುತ್ತಾರೆ, 1 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ. ಆದರೆ ರೈತರ ಪರಿಹಾರ ವಿಚಾರಕ್ಕೆ ಬಂದಾಗ ಕೇಂದ್ರ ಸರ್ಕಾರ, ಮೋದಿ ಸರ್ಕಾರ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಕಿಡಿಕಾರಿದೆ.
RELATED ARTICLES

Latest News