Sunday, May 5, 2024
Homeಬೆಂಗಳೂರುಹೊಸ ವರ್ಷಾಚರಣೆ : ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಹೊಸ ವರ್ಷಾಚರಣೆ : ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು, ಡಿ.31- ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತ 16 ಐಲ್ಯಾಂಡ್ ಮತ್ತು 18 ವಾಚ್ ಟವರ್‍ಗಳನ್ನು ನಿರ್ಮಿಸಲಾಗಿದೆ. ಸಂಭ್ರಮಾಚರಣೆ ವೇಳೆ ಮಹಿಳೆಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರಾದರೆ ಅವರುಗಳಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ನೀಡಲು ಐಲ್ಯಾಂಡ್‍ಗಳನ್ನು ನಿರ್ಮಿಸಲಾಗಿದೆ.

ಇದರಲ್ಲಿ ಮಹಿಳಾ ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ. ಈ ರಸ್ತೆಗಳಲ್ಲಿ 18 ವಾಚ್ ಟವರ್‍ಗಳನ್ನು ನಿರ್ಮಿಸಲಾಗಿದ್ದು, ಪೊಲೀಸ್ ಸಿಬ್ಬಂದಿ ಅಲ್ಲಿ ಬೆಳಗಿನ ಜಾವದ ತನಕ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚು ಸಿಸಿಟಿವಿಗಳನ್ನು ಸಹ ಅಳವಡಿಸಲಾಗಿದೆ. ವರ್ಷಾಚರಣೆಯ ಪ್ರಮುಖ ಕೇಂದ್ರವಾದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತ ನಾಲ್ವರು ಡಿಸಿಪಿಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಕಾರಿಗಳು ಸೇರಿದಂತೆ 8500 ಪೊಲೀಸರನ್ನು ನಗರದಾದ್ಯಂತ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

ಹೊಸ ವರ್ಷಾಚರಣೆ : 2 ಗಂಟೆವರೆಗೂ ಬಿಎಂಟಿಸಿ ಬಸ್ ಸಂಚಾರ

ಇಂದು ರಾತ್ರಿ ಎಂಟು ಗಂಟೆಯಿಂದಲೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಂಚಾರಿ ಪೆÇಲೀಸರು ತೀರ್ಮಾನಿಸಿದ್ದಾರೆ. ರಾತ್ರಿ 8 ಗಂಟೆ ನಂತರ ಏರ ಪೋರ್ಟ್ ಪ್ಲೈಓವರ್ ಬಿಟ್ಟು ಉಳಿದ ಎಲ್ಲ ಪ್ಲೈಓವರ್ ಗಳನ್ನು ಬಂದ್ ಮಾಡಲಾಗುತ್ತಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಬರುವವರು ಪೊಲೀಸರು ಗುರುತಿಸಿರುವ ಜಾಗದಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಬೇಕಾಬಿಟ್ಟಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ಟೋಯಿಂಗ್ ಮಾಡಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ವರ್ಷಾಚರಣೆ ಸಂಭ್ರಮದಲ್ಲಿ ತೇಲಾಡುವವರ ವಿರುದ್ಧ ಹದ್ದಿನ ಕಣ್ಣಿಡುವ ಉದ್ದೇಶದಿಂದ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ 800 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಅದರಲ್ಲೂ ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಹೆಚ್ಚು ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಬ್ರಿಗೇಡ್ ರೋಡ್‍ನ ಎರಡು ಬದಿಯ ವಿದ್ಯುತ್ ಕಂಬಗಳಿಗೆ ನಾಲ್ಕು ನಾಲ್ಕು ಸಿಸಿಟಿವಿಗಳನ್ನು ಅಳವಡಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಮೇಲೆ ನಿಗಾ ಇಡಲಾಗಿದೆ ಮಾತ್ರವಲ್ಲ, ಎಲ್ಲರ ಚಲ-ವಲನಗಳು ಡಿಸ್‍ಪ್ಲೇ ಬೋರ್ಡ್‍ನಲ್ಲಿ ಕಾಣಿಸುವಂತೆ ನೋಡಿಕೊಳ್ಳಲಾಗಿದೆ.ಇದರ ಜತೆಗೆ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನ ಗಲ್ಲಿ ಗಲ್ಲಿಯನ್ನು ಒಂದೇ ಕಡೆ ಕುಳಿತು ನೋಡುವಂತೆ ವಾರ್ ರೂಂ ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಗಮನಿಸಲೆಂದೇ ಎರಡು ಸ್ಪೆಷಲ್ ಟೀಂ ನಿಯೋಜನೆ ಮಾಡಲಾಗಿದೆ.

ಹೊಸ ವರ್ಷದಲ್ಲಿ ಭಾರಿ ಏರಿಕೆಯಾಗಲಿದೆಯಂತೆ ಚಿನ್ನದ ಬೆಲೆ..!

ವಾಟ್ಸಾಫ್ ಗ್ರೂಪ್: ಕುಡಿದ ಅಮಲಿನಲ್ಲಿ ಪುಂಡಾಟ ನಡೆಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಲು ಅನುಕೂಲವಾಗುವಂತೆ ಪಬ್, ರೆಸ್ಟೋರೆಂಟ್ ಮಾಲಿಕರ ವಾಟ್ಸಾಫ್ ಗ್ರೂಪ್ ರಚಿಸಲಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿರುವ ಪ್ರತಿಯೊಬ್ಬರೂ ಪ್ರತಿಕ್ಷಣದ ಮಾಹಿತಿಗಳನ್ನು ಅಪ್‍ಡೇಟ್ ಮಾಡುತ್ತಿರಬೇಕು ಎಂದು ಸೂಚಿಸಲಾಗಿದೆ. ಈ ಗ್ರೂಪ್‍ನಲ್ಲಿ ಸ್ಥಳೀಯ ಪೊಲೀಸರು, ಅಯುಕ್ತರು, ಡಿಸಿಪಿಗಳು, ಎಸಿಪಿಗಳು ಸೇರಿದಂತೆ ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಇರುವುದು ವಿಶೇಷವಾಗಿದೆ.

ಪಬ್ ಮತ್ತು ಬಾರ್‍ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕೂಡಲೇ ಗ್ರೂಪ್ ಮೂಲಕ ಮಾಹಿತಿ ನೀಡಬೇಕು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲಿದ್ದಾರೆ.

RELATED ARTICLES

Latest News