Sunday, September 15, 2024
Homeರಾಜಕೀಯ | Politicsಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಫಲ ನೀಡಲ್ಲ । ನಿಖಿಲ್

ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಫಲ ನೀಡಲ್ಲ । ನಿಖಿಲ್

ಬೆಂಗಳೂರು,ಆ.25- ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಸ್ಥಾನದಿಂದ ಎಚ್.ಡಿ.ಕುಮಾರಸ್ವಾಮಿಯವರನ್ನು ಇಳಿಸಬೇಕೆಂಬ ಕಾಂಗ್ರೆಸ್ ಮಾಡುವ ಪ್ರಯತ್ನ ಫಲ ನೀಡುವುದಿಲ್ಲ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಯವರನ್ನು ಯಾವ ರೀತಿ ಕಟ್ಟಿ ಹಾಕಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇದೆ. ಆದರೂ ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವಿದ್ದರೆ 2018 ರ ವಿಧಾನಸಭಾ ಚುನಾವಣೆಯ ನಂತರ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಏಕೆ ಬಂದಿದ್ದರು ಎಂದು ಪ್ರಶ್ನಿಸಿದರು.

ಗಣಿಗಾರಿಕೆಗೆ ಅನುಮತಿ ನೀಡಿ ಕುಮಾರಸ್ವಾಮಿ ಸಹಿ ಹಾಕಿಲ್ಲ. ಆದರೂ ಎಸ್ಐಟಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿದೆ. ಇದು ಮುಡಾ ಹಗರಣವನ್ನು ಮುಚ್ಚಿ ಹಾಕಲು ಮಾಡಿರುವ ಯೋಜನೆಯಷ್ಟೇ ಎಂದು ಟೀಕಿಸಿದ ಅವರು, ಈ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶಾದ್ಯಂತ ಮುಡಾ ಹಗರಣ ವಿಚಾರ ಚರ್ಚೆಯಾಗುತ್ತಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ದಾಖಲೆ ಹೊರಬರುತ್ತಿದೆ. ಆದರೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.ಲೋಕಸಭಾ ಚುನಾವಣೆ ಬಳಿಕ ಹಳೆ ಮೈಸೂರು ಭಾಗದಲ್ಲಿ ಮಾತ್ರವಲ್ಲದೆ, ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಶಕ್ತಿ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ನವರು ಕಂಗಾಲಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪತ್ನಿ ಪಾರ್ವತಮನವರು ನಿವೇಶನ ಕೋರಿ ಬರೆದಿರುವ ಪತ್ರ ಬಹಿರಂಗವಾಗಿದೆ. ಆ ಪತ್ರದಲ್ಲಿ 40:60 ಅನುಪಾತದ ನಿವೇಶನ ನಮಗೆ ಬೇಡ. ಇಂತಹ ಜಾಗವೇ ಬೇಕೆಂದು ಕೋರಿದ್ದಾರೆ. ಅದನ್ನು ವೈಟ್ನರ್ ಹಾಕಿ ಅಳಿಸಿದ್ದಾರೆ. ಅದರಲ್ಲಿ ಏನು ಬರೆದಿದ್ದರು? ಎಂದು ಪ್ರಶ್ನಿಸಿದ ಅವರು, ವಿಜಯನಗರದಲ್ಲಿ ನಿವೇಶನ ಕೇಳಿದ್ದರು ಎಂಬ ಮಾಹಿತಿ ನಮಗಿದೆ ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ಗೆ ನೆಲೆ ಇಲ್ಲ :
ಆಡಳಿತಾರೂಢ ಕಾಂಗ್ರೆಸ್ಗೆ ಚನ್ನಪಟ್ಟಣದಲ್ಲಿ ನೆಲೆ ಇಲ್ಲ. ಚನ್ನಪಟ್ಟಣ ಕ್ಷೇತ್ರದ ಇತಿಹಾಸದಲ್ಲಿ ಆ ಪಕ್ಷ ಗಳಿಸಿರುವ ಮತಗಳು ಹಾಗೂ ಜೆಡಿಎಸ್ ಪಕ್ಷ ಗಳಿಸಿರುವ ಮತಗಳನ್ನು ಅವಲೋಕಿಸಿದಾಗ ಇದು ತಿಳಿಯುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜೆಡಿಎಸ್ಗೆ 60 ಸಾವಿರದಷ್ಟು ಸಾಂಪ್ರದಾಯಿಕ ಮತಗಳಿಗೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ಗೂ ವೈಯಕ್ತಿಕ ವರ್ಚಸ್ಸಿದೆ. ಈ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದೇ ಎರಡೂ ಪಕ್ಷಗಳ ನಾಯಕರ ಉದ್ದೇಶ.

ದೆಹಲಿ ಮಟ್ಟದ ಬಿಜೆಪಿ ನಾಯಕರು, ನಮ ನಾಯಕರು ಸಮಾಲೋಚನೆ ನಡೆಸಿ ಉಪಚುನಾವಣೆಯ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ. ಚುನಾವಣೆ ಸಂಬಂಧದ ವರದಿ ಈಗಾಗಲೇ ಹೈಕಮಾಂಡ್ ಕೈ ಸೇರಿದ್ದು, ಸದ್ಯದಲ್ಲೇ ಎನ್ಡಿಎ ಅಭ್ಯರ್ಥಿ ಯಾರೆಂಬುದನ್ನು ಘೋಷಣೆ ಮಾಡುತ್ತಾರೆ ಎಂದರು.

RELATED ARTICLES

Latest News